ರಾಜ್ಯದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ: ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಭಾರತದ 73ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾಣಿಕ್‌ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯವನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಅತಿವೃಷ್ಟಿ ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿ ತತ್ತರಿಸುತ್ತಿದೆ. ಈ ಎರಡು ಪರಿಸ್ಥಿತಿ ಎದುರಿಸಲು ನನ್ನ ಸರ್ಕಾರ ಸನ್ನದವಾಗಿದೆ. 103 ತಾಲೂಕು ಭೀಕರ ಪ್ರವಾಹಕ್ಕೆ ತುತ್ತಾಗಿದೆ.61 ಮಂದಿ ಸಾವನ್ನಪ್ಪಿದ್ದಾರೆ. 859 ಜಾನುವಾರು ಸಾವನ್ನಪ್ಪಿದೆ. 4.64 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಪ್ರವಾಹ ಹಾಗೂ ಭೂ ಕುಸಿತ ಮತ್ತು 58620 ಮನೆಗಳಿಗೆ ಹಾನಿಯಾಗಿದೆ. ಕೇಂದ್ರದ ಅನುದಾನ ತರುವುದು ಸೇರಿದಂತೆ ಜನರ ಸಂಕಷ್ಟಗಳಿಗೆ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಲು ಸರ್ಕಾರ ಯಾವ ಪ್ರಯತ್ನವನ್ನು ಕೈಬಿಟ್ಟಿಲ್ಲ ಎಂದು ಬಿಎಸ್‌ ವೈ ಹೇಳಿದರು.

ಕನ್ನಡಕ್ಕೆ ಆದ್ಯತೆ, ಅನ್ನದಾತರ ಹಿತ ರಕ್ಷಣೆ, ಜನ ಹಿತಕ್ಕಾಗಿ ಸರ್ಕಾರ, ಕೈಗಾರಿಕೆಗೆ ಉತ್ತೇಜನ ಕೌಶಲಾಭಿವೃದ್ಧಿ ಮತ್ತು ಉದ್ಯೋಗಸೃಷ್ಟಿ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ದುರ್ಬಲ ವರ್ಗದ ಕಲ್ಯಾಣವೇ ಈ ಸರ್ಕಾರದ ಗುರಿಯಾಗಿದ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ