ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ; ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಮೋಹಕತಾರೆ ರಮ್ಯಾ?

ಬೆಂಗಳೂರು: ಸ್ಯಾಂಡಲ್ವುಡ್ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಕಾಲಿವುಡ್ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದ ರಮ್ಯಾ ಇದ್ದಕ್ಕಿದ್ದಂತೆ ಸಿನಿಜೀವನಕ್ಕೆ ವಿದಾಯ ಹೇಳಿ ರಾಜಕೀಯದಲ್ಲಿ ತೊಡಗಿಸಿಕೊಂಡರು.  2 ವರ್ಷಗಳಿಂದ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದೆ ಅಜ್ಞಾತರಾಗಿದ್ದ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಮೋಹಕತಾರೆ ರಮ್ಯಾ ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ? ಇಲ್ಲಿದೆ ಮಾಹಿತಿ.

ಕಳೆದ ವರ್ಷ ಸ್ಯಾಂಡಲ್​ವುಡ್​ನಲ್ಲಿ ಮದುವೆಯದ್ದೇ ಸದ್ದು. ದಿಗಂತ್​- ಐಂದ್ರಿತಾ ರೇ, ನಟಿ ಭಾವನಾ, ನೇಹಾ ಗೌಡ, ಚಿರಂಜೀವಿ ಸರ್ಜಾ- ಮೇಘನಾ ರಾಜ್, ಸ್ಕಂದ ಅಶೋಕ್, ನಯನಾ ಪುಟ್ಟಸ್ವಾಮಿ, ಸುನಿಲ್ ರಾವ್, ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದರಾಮ್ ವಿವಾಹವಾಗಿದ್ದರು. ಈ ವರ್ಷ ನಟ ಯುವರಾಜ್​ಕುಮಾರ್​ ಹಸೆಮಣೆಯೇರಿದ್ದರು. ಇದೀಗ ನಟಿ ರಮ್ಯಾ ಸರದಿ.

ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ ‘ಅಭಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಮ್ಯಾ ನಂತರ ಹಿಂತಿರುಗಿ ನೋಡಲೇ ಇಲ್ಲ. ಸಾಲುಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಹೋದ ಅವರು ಕನ್ನಡದ ಎಲ್ಲ ಸೂಪರ್​ಸ್ಟಾರ್​ಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. 2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾ ನಂತರ ರಮ್ಯಾ ಯಾವ ಚಿತ್ರದಲ್ಲೂ ನಟಿಸಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ