ಬೆಂಗಳೂರು: ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಕಾಲಿವುಡ್ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದ ರಮ್ಯಾ ಇದ್ದಕ್ಕಿದ್ದಂತೆ ಸಿನಿಜೀವನಕ್ಕೆ ವಿದಾಯ ಹೇಳಿ ರಾಜಕೀಯದಲ್ಲಿ ತೊಡಗಿಸಿಕೊಂಡರು. 2 ವರ್ಷಗಳಿಂದ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದೆ ಅಜ್ಞಾತರಾಗಿದ್ದ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಮೋಹಕತಾರೆ ರಮ್ಯಾ ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ? ಇಲ್ಲಿದೆ ಮಾಹಿತಿ.
ಕಳೆದ ವರ್ಷ ಸ್ಯಾಂಡಲ್ವುಡ್ನಲ್ಲಿ ಮದುವೆಯದ್ದೇ ಸದ್ದು. ದಿಗಂತ್- ಐಂದ್ರಿತಾ ರೇ, ನಟಿ ಭಾವನಾ, ನೇಹಾ ಗೌಡ, ಚಿರಂಜೀವಿ ಸರ್ಜಾ- ಮೇಘನಾ ರಾಜ್, ಸ್ಕಂದ ಅಶೋಕ್, ನಯನಾ ಪುಟ್ಟಸ್ವಾಮಿ, ಸುನಿಲ್ ರಾವ್, ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದರಾಮ್ ವಿವಾಹವಾಗಿದ್ದರು. ಈ ವರ್ಷ ನಟ ಯುವರಾಜ್ಕುಮಾರ್ ಹಸೆಮಣೆಯೇರಿದ್ದರು. ಇದೀಗ ನಟಿ ರಮ್ಯಾ ಸರದಿ.
ಪುನೀತ್ ರಾಜ್ಕುಮಾರ್ಗೆ ಜೋಡಿಯಾಗಿ ‘ಅಭಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಮ್ಯಾ ನಂತರ ಹಿಂತಿರುಗಿ ನೋಡಲೇ ಇಲ್ಲ. ಸಾಲುಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಹೋದ ಅವರು ಕನ್ನಡದ ಎಲ್ಲ ಸೂಪರ್ಸ್ಟಾರ್ಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. 2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾ ನಂತರ ರಮ್ಯಾ ಯಾವ ಚಿತ್ರದಲ್ಲೂ ನಟಿಸಲಿಲ್ಲ.