ವಾಷಿಂಗ್ಟನ್, ಆ.13- ಭಾರತ ಮತ್ತು ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದ ಇತ್ಯರ್ಥ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೆಂದೂ ಮಧ್ಯಸ್ಥಿಕೆ ವಹಿಸುವುದಿಲ್ಲ.
ಅಮೆರಿಕಕ್ಕೆ ಭಾರತದ ರಾಯಭಾರಿ ಆಗಿರುವ ಹರ್ಷವರ್ಧನ ಶೃಂಗ್ಲಾ ಇದನ್ನು ಖಚಿತಪಡಿಸಿದ್ದಾರೆ.
ಕಾಶ್ಮೀರ ಕುರಿತ ಮಧ್ಯಸ್ಥಿಕೆಯ ತಮ್ಮ ಪ್ರಸ್ತಾಪವನ್ನು ಇನ್ನು ಮುಂದೆ ಪ್ರಸ್ತಾವನೆಯ ಮೇಜಿನ ಮೇಲೆ ಎಂದಿಗೂ ಮಂಡಿಸುವುದಿಲ್ಲ ಎಂದು ಅಮೆರಿಕ ರಾಷ್ಟ್ರಾಧ್ಯಕ್ಷರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಎಂದು ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ತನ್ನ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಸೌಹಾರ್ದಯುತ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅಮೆರಿಕ ಪೆÇ್ರೀ ನೀಡುತ್ತದೆ ಎಂದು ಟ್ರಂಪ್ ತಿಳಿಸಿರುವುದಾಗಿ ಹರ್ಷವರ್ಧ ನ ಶೃಂಗ್ಲಾ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರ ಅಚ್ಚುಮೆಚ್ಚಿನ ವಾರ್ತಾ ವಾಹಿನಿ ಫಾಕ್ಸ್ ಚಾನೆಲ್‍ಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತೀಯ ರಾಯಭಾರಿ ಈ ವಿಷಯಗಳನ್ನು ತಿಳಿಸಿದ್ದಾರೆ.