ತುರ್ತು ವಿಚಾರಣೆಗಾಗಿ ಅನೂರ್ಜಿತ ಎಂಎಲ್‍ಎಗಳ ಮನವಿ

Varta Mitra News

ನವದೆಹಲಿ, ಆ.13-ದೇಶಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಬಂಡಾಯ ಶಾಸಕರ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದರ ತುರ್ತು ವಿಚಾರಣೆಗಾಗಿ ಅನೂರ್ಜಿತ ಎಂಎಲ್‍ಎಗಳು ಇಂದು ಮನವಿ ಮಾಡಿದ್ದಾರೆ.

ಬಂಡಾಯ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಇಂದು ತಮ್ಮ ಕಕ್ಷಿದಾರರ ಅರ್ಜಿಗಳ ತ್ವರಿತ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠಕ್ಕೆ ಇಂದು ಬೆಳಗ್ಗೆ ಮನವಿ ಮಾಡಿದರು.

ಈ ಪ್ರಕರಣದ ತುರ್ತು ವಿಚಾರಣೆಗಾಗಿ ದಿನಾಂಕ ನಿಗದಿಗೊಳಿಸುವಂತೆ ಸುಪ್ರೀಂಕೋರ್ಟ್‍ನ ರಿಜಿಸ್ಟ್ರಾರ್‍ಗೆ ಮೆಮೋ ನೀಡುವಂತೆ ಪೀಠವು ರೋಹ್ಟಗಿ ಅವರಿಗೆ ಸೂಚಿಸಿತು.
ಈ ಎಲ್ಲ ಶಾಸಕರನ್ನು ಅನರ್ಹಗೊಳಿಸಲಾಗಿದೆ ಮತ್ತು ತಮ್ಮ ಕಕ್ಷಿದಾರರ ಮನಿವಿಗಳನ್ನು ಆ.19ರಂದು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಹಿರಿಯ ವಕೀಲರು ಕೋರಿದರು.

ಸುಪ್ರೀಂಕೋಟ್ ರಿಜಿಸ್ಟ್ರಾರ್‍ನಲ್ಲಿ ಬಂಡಾಯ ಅನರ್ಹ ಶಾಸಕರ ಪರ ವಕೀಲಯರಿಂದ ಮೆಮೊ ಸಲ್ಲಿಕೆಯಾದ ನಂತರ ನ್ಯಾಯಾಲಯವು ವಿಚಾರಣೆ ದಿನಾಂಕವನ್ನು ನಿಗದಿಗೊಳಿಸುತ್ತದೆ.

ರಾಜಕೀಯ ಹಗ್ಗ ಜಗ್ಗಾಟದ ನಂತರ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿ ವಿಧಾನಸಭೆಯಲ್ಲಿ ಜು.29ರಂದು ವಿಶ್ವಾಸ ಮತ ಯಾಚನೆಗೆ ಮುನ್ನ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಪ್ರತ್ಯೇಕವಾಗಿ ಒಟ್ಟು 17 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದರು.

ಕುಮಾರಸ್ವಾಮಿ ಅವರು ವಿಶ್ವಾಸಮತದಲ್ಲಿ ಪರಾಭವಗೊಂಡು ಹಿರಿಯ ಧುರೀಣ ಬಿ.ಎಸ್.ಯಡ್ಯೂರಪ್ಪ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ವಿತ್ವಕ್ಕೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ