ಬೆಂಗಳೂರು, ಆ.10- ಹೈದರಾಬಾದ್ಗೆ ಬೆಂಗಳೂರಿನಿಂದ ಪ್ರಯಾಣಿಸಲು ಹೆಚ್ಚುವರಿ ನಾನ್ಸ್ಟಾಪ್ ವಿಮಾನಗಳನ್ನು ಗೋ ಏರ್ ವಿಮಾನಯಾನ ಸಂಸ್ಥೆ ಸೇರ್ಪಡೆಗೊಳಿಸಿದೆ.
ಜಿ8-510 ವಿಮಾನ ಬೆಂಗಳೂರಿನಿಂದ ಬೆಳಗ್ಗೆ 7.25ಕ್ಕೆ ಹೊರಟು ಹೈದರಾಬಾದ್ಅನ್ನು 8.30ಕ್ಕೆ ತಲುಪಲಿದೆ ಮತ್ತು ಅದೇ ವಿಮಾನ ಬೆಂಗಳೂರಿನಿಂದ 12.35ಕ್ಕೆ ಹೊರಟು 1.45ಕ್ಕೆ ಹೈದರಾಬಾದ್ ತಲುಪಲಿದೆ.
ಜಿ8-509 ವಿಮಾನ ಹೈದರಾಬಾದ್ನಿಂದ 5.15ಕ್ಕೆ ಹೊರಟು 6.25ಕ್ಕೆ ಬೆಂಗಳೂರು ತಲುಪಲಿದ್ದು, ಜಿ8-517 ಹೈದರಾಬಾದ್ನಿಂದ 10.45ಕ್ಕೆ ಹೊರಟು 11.45ಕ್ಕೆ ಬೆಂಗಳೂರು ತಲುಪುತ್ತದೆ.
ಈ ಹೊಸ ಮಾರ್ಗಗಳಿಂದಾಗಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಬೆಳಗ್ಗೆ ಜಿ8-510 ಸೇವೆ ಬಳಸಿ ಸಂಜೆ ಜಿ8-517 ಮೂಲಕ ಮರಳಿ ಬೆಂಗಳೂರು ಸೇರಬಹುದು.
ಈ ಹೊಸ ಮಾರ್ಗಗಳಿಂದ ಎರಡು ನಗರಗಳ ನಡುವೆ ಸಂಪರ್ಕ ಮತ್ತಷ್ಟು ಉತ್ತಮಗೊಳ್ಳಲಿದೆ. ಈ ಸೇವೆ ಆ.7ರಿಂದಲೇ ಆರಂಭಗೊಂಡಿದ್ದು, ಈಗಾಗಲೇ ಗೋ ಏರ್ ತನ್ನ 300 ವಿಮಾನಗಳನ್ನು ದೇಶಾದ್ಯಂತ ಕಾರ್ಯನಿರ್ವಹಿಸಿ ಉತ್ತಮ ಹೆಸರು ಪಡೆದಿದೆ.
ಜೂನ್ನಲ್ಲಿ 13.3 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಿರುವ ಗೋ ಏರ್ ಅಲಹಾಬಾದ್, ಭುವನೇಶ್ವರ್, ಚಂಡೀಗಢ, ಚೆನ್ನೈ, ದೆಹಲಿ, ಗೋವಾ ಸೇರಿದಂತೆ 24 ದೇಶೀಯ ಸಂಸ್ಥೆಗಳಿಗೆ ಸೇವೆ ಸಲ್ಲಿಸುತ್ತಿದೆ.
ಇದಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಾರಾಟ ನಡೆಸುವ ಈ ಸಂಸ್ಥೆಯ ವಿಮಾನ ಶೀಘ್ರದಲ್ಲೇ ಇನ್ನೂ ಎರಡು ತಾಣಗಳನ್ನು ಹೆಚ್ಚಿಸಿಕೊಳ್ಳಲಿದೆ.