ಸಂವಿಧಾನದ 370ನೇ ಅನುಚ್ಛೇದವನ್ನುರಾಷ್ಟ್ರಪತಿ ರಾಮನಾಥ ಕೋವಿಂದ್ ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಅನುಚ್ಛೇದವನ್ನು ರದ್ದುಗೊಳಿಸಿರುವುದಾಗಿ ರಾಷ್ಟ್ರಪತಿ ರಾಮನಾಥ
ಕೋವಿಂದ್ ಘೋಷಿಸಿದ್ದಾರೆ.

ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಸಂಬಂಧ ಗೆಜೆಟ್ ಪ್ರಕಟಣೆ ಹೊರಡಿಸಿದೆ. ಸಂಸತ್ತಿನ ಉಭಯ ಸದನಗಳು ಈ ಸಂಬಂಧ ನಿರ್ಣಯ
ಅಂಗೀಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗಡಿಯಲ್ಲಿನ ಭಯೋತ್ಪಾದಕತೆಯಿಂದ ನಲುಗಿ ಹೋಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿನ ಆಂತರಿಕ ಭದ್ರತಾ ಪರಿಸ್ಥಿತಿಯನ್ನು ಕಾಯ್ದುಕೊಳ್ಳಲು
ವಿಧಾನಸಭೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದರೊಂದಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿಗಣಿಸಲು ತೀರ್ಮಾನಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ಅನುಚ್ಛೇಧದನ್ವಯ ವಿಶೇಷ ಸ್ಥಾನಮಾನ ಕಲ್ಪಿಸಿದ್ದರಿಂದ ರಾಜ್ಯದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯ
ಬೇರುಗಳು ಗಟ್ಟಿಯಾಗುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ವಿಶೇಷ ಸ್ಥಾನಮಾನದಿಂದಾಗಿ ಅಲ್ಪಸಂಖ್ಯಾತರಾದ ಸಿಖ್ಖರು, ಬೌದ್ಧರು ಮತ್ತು ಇತರರ ವಿರುದ್ಧ ತಾರತಮ್ಯ ನೀತಿ ಅನುಸರಿಸಲಾಗುತ್ತಿತ್ತು.

ಕಳೆದ 7 ದಶಕಗಳಲ್ಲಿ ಸುಮಾರು 41 ಸಾವಿರ ಜನರ ಹತ್ಯೆಯಾಗಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ಅನುಚ್ಛೇಧದನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ನಿರ್ಧಾರ
ಭಾರತದ ಆಂತರಿಕ ವಿಷಯವಾಗಿದೆ ಎಂದು ಬಾಂಗ್ಲಾದೇಶ ಪ್ರತಿಕ್ರಿಯಿಸಿದೆ.

ಇನ್ನೊಬ್ಬರ ಆಂತರಿಕ ವಿಚಾರಗಳ ಬಗ್ಗೆ ಯಾವುದೇ ಹೇಳಿಕೆ ನೀಡುವ ಹಕ್ಕು ತನಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವ ಭಾರತದ ನಿರ್ಧಾರ ಆ ದೇಶದ ಆಂತರಿಕ ವಿಷಯವೆಂದು ಮಾಲ್ಡೀವ್ಸ್ ಪ್ರತಿಕ್ರಿಯಿಸಿದೆ.

ತನ್ನ ಕಾನೂನುಗಳನ್ನು ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುವುದು ಪ್ರತಿಯೊಂದು ಸಾರ್ವಭೌಮ ರಾಷ್ಟ್ರದ ಹಕ್ಕು ಆಗಿರುತ್ತದೆ ಎಂದು ತಾನು
ನಂಬುವುದಾಗಿ ಮಾಲ್ಡೀವ್ಸ್ ಸರ್ಕಾರ ಹೇಳಿಕೆಯೊಂದರಲ್ಲಿ ಪ್ರತಿಕ್ರಿಯಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ