ಮಾಜಿ ವಿದೇಶಾಂಗ ಸಚಿವರೂ ಬಿಜೆಪಿಯ ಹಿರಿಯ ಮುಖಂಡರೂ ಆದ ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಶ್ರೀ ಸಿ.ಟಿ.ರವಿ, ಶ್ರೀ ಎನ್.ರವಿಕುಮಾರ್ ಅವರು ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿ, ಅವರ ಕುರಿತು ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ *ಶ್ರೀ ಲೆಹರ್ ಸಿಂಗ್*, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ *ಶ್ರೀ ಅರುಣ ಕುಮಾರ್,* ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷರಾದ *ಶ್ರೀ ಬಿ.ಜೆ.ಪುಟ್ಟಸ್ವಾಮಿ*, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ *ಶ್ರೀ ಜಗದೀಶ್ ಹಿರೇಮನಿ, ಶ್ರೀ ಜಯದೇವ* ಹಾಗೂ ಪಕ್ಷದ ಮತ್ತಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.