ಪ್ರತಿಯೊಬ್ಬ ಕಾನ್‍ಸ್ಟೇಬಲ್ ಕೂಡ ಕಮೀಷನರಂತೆ ಕೆಲಸ ಮಾಡಬೇಕು

ಬೆಂಗಳೂರು,ಆ.05-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾಗಿರುವ ಬೆಂಗಳೂರಿನಲ್ಲಿ ಅನಗತ್ಯವಾದ ವ್ಯವಹಾರಿಕ ಪೈಪೆÇೀಟಿಯಿಂದ ಶಾಂತಿ ಕದಡಿದೆ. ಅದನ್ನು ಪುನರ್ ಸ್ಥಾಪಿಸಬೇಕಿದೆ.ಅದಕ್ಕಾಗಿ ಕೆಳಹಂತದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಎಲ್ಲರೂ ತಾವೇ ಪೆÇಲೀಸ್ ಆಯುಕ್ತರೆಂಬಂತೆ ಕೆಲಸ ಮಾಡಬೇಕು. ಆ ರೀತಿಯ ಆತ್ಮವಿಶ್ವಾಸವನ್ನೂ ಮೂಡಿಸುವುದು ನನ್ನ ಆದ್ಯತೆ….

ಭಾಸ್ಕರ್ ರಾವ್, ಪೆÇಲೀಸ್ ಆಯುಕ್ತರು:
ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಹೊಸ ಆಯುಕ್ತರು ಬಂದಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಜನಸ್ನೇಹಿಯಾಗಿ, ದುರ್ಬಲ ವರ್ಗದವರ ಜೊತೆ ಮಾತೃಹೃದಯಿಯಾಗಿ, ಕಿಡಿಗೇಡಿಗಳ ಪಾಲಿಗೆ ಕಠಿಣ ಅಧಿಕಾರಿಯಾಗಿ ತಮ್ಮದೇ ಆದೇ ಛಾಪು ಮೂಡಿಸಿರುವ ಭಾಸ್ಕರ್ ರಾವ್ ಅವರು ಸಿಲಿಕಾನ್ ಸಿಟಿಯ ರಕ್ಷಣೆ ಜವಾಬ್ದಾರಿ ಹೊತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸ್ಮೈಲಿ ಕಮಿಷನರ್ ಎಂಬ ಛಾಪು ಮೂಡಿಸಿರುವ ಅವರು ತಮ್ಮ ಆದ್ಯತೆ ಮತ್ತು ಸವಾಲುಗಳ ಬಗ್ಗೆ ಸುದ್ದಿಗಾರರ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಪೂರ್ಣ ವಿವರ ಕೆಳಗಿದೆ.

ಬೆಂಗಳೂರು ನಗರ ಪೆÇಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನಿಮ್ಮ ಆದ್ಯತೆಗಳೇನು ?
ಬೆಂಗಳೂರಿನ ರಕ್ಷಣೆ ಜವಾಬ್ದಾರಿ ಅತ್ಯಂತ ಮಹತ್ವದ ಹುದ್ದೆ.ಇದನ್ನು ಯಾರ ಒಬ್ಬರ ಕೈಯಲ್ಲಿ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸಹಕಾರವೂ ಬೇಕು.ಬೆಂಗಳೂರು ಈ ಮೊದಲು ಅತ್ಯಂತ ಸಂತೋಷದ ನಗರವಾಗಿತ್ತು.ಇತ್ತೀಚೆಗೆ ವ್ಯವಹಾರಿಕವಾಗಿ ಬೆಳೆದಂತೆಲ್ಲಾ ಎಲ್ಲಾ ಕ್ಷೇತ್ರಗಳಲ್ಲೂ ಪೈಪೆÇೀಟಿ ಹೆಚ್ಚಾಗಿದೆ.

ದ್ವೇಷ, ಅಸೂಯೆ, ಕೋಪ, ಅಸಹಿಷ್ಣತೆ ಹೆಚ್ಚಾಗಿದೆ.ಎಲ್ಲರಿಗೂ ಅವಕಾಶಗಳಿವೆ. ಆದರೂ ಆಕಾಶ ನೋಡಲು ನೂಕುನುಗ್ಗಲು ಎಂಬಂತೆ ಸ್ಪರ್ಧೆಗಿಳಿಸಿದ್ದಾರೆ.ಇದರಿಂದಾಗಿ ಶಾಂತಿ ಕದಡಿದೆ.ಮೊದಲು ಇದನ್ನು ತಹಬದಿಗೆ ತರಬೇಕು.ನಮ್ಮ ಪೆÇಲೀಸ್ ಸಿಬ್ಬಂದಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಅಧಿಕಾರಿಗಳ ಮೇಲೆ ಒತ್ತಡ ಬೀಳದೇ ಹೋದರೆ ಸಿಬ್ಬಂದಿಗಳಿಗೂ ಒತ್ತಡ ಆಗುವುದಿಲ್ಲ. ಆ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ.

ಬೆಂಗಳೂರನ್ನು ಕೂಲ್‍ಸಿಟಿ ಮಾಡಲು ನಿಮ್ಮ ಕಾರ್ಯಯೋಜನೆ ಏನು?
ಬೆಂಗಳೂರು ನಗರ ಪೆÇಲೀಸ್ ಆಯುಕ್ತರಲ್ಲಿ ಇರುವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಸಿಬ್ಬಂದಿಗಳನ್ನೇ ಬಳಸಿಕೊಂಡು ಸುರಕ್ಷಿತ ವಾತಾವರಣ ನಿರ್ಮಿಸಲು ಪ್ರಯತ್ನಿಸುವೆ. ಕೆಳ ಹಂತದಲ್ಲಿ ಕೆಲಸ ಮಾಡುವ ಕಾನ್‍ಸ್ಟೇಬಲ್‍ಗಳ ಹಾಗೂ ಕಮೀಷನರ್ ಆಫ್ ಪೆÇಲೀಸರ ಆತ್ಮವಿಶ್ವಾಸದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಆತ್ಮಸ್ಥೈರ್ಯ ತುಂಬುತ್ತೇನೆ. ಅದಕ್ಕೆ ಬೇಕಾದ ಧೈರ್ಯ, ವಿಶ್ವಾಸ ಮತ್ತು ವೃತ್ತಿ ಕೌಶಲ್ಯದ ತರಬೇತಿ ಕೊಡಿಸಲಾಗುವುದು.

ಎಲ್ಲದಕ್ಕೂ ಮೇಲಿನ ಅಧಿಕಾರಿಗಳನ್ನು ಆಶ್ರಯಿಸುವುದಕ್ಕಿಂತಲೂ ಪ್ರಥಮ ಹಂತದಲ್ಲಿ ಸಾರ್ವಜನಿಕರನ್ನು ತಲುಪುವ ಕೆಳ ಹಂತದ ಸಿಬ್ಬಂದಿಗಳು ತಾಳ್ಮೆ ಮತ್ತು ಬುದ್ದಿವಂತಿಕೆಯಿಂದ ಕೆಲಸ ಮಾಡಿದರೆ ಬಹಳಷ್ಟು ಸಮಸ್ಯೆಗಳು ಕೆಳಹಂತದಲ್ಲೇ ಬಗೆಹರಿಯುತ್ತವೆ. ಅವುಗಳನ್ನು ಬಿಗಡಾಯಿಸಲು ಬಿಟ್ಟರೆ ಕಾನೂನು-ಕಟ್ಟಲೆಗಳ ವ್ಯಾಪ್ತಿಗೆ ಬರುತ್ತವೆ. ಆಗ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ನನ್ನ ಪ್ರಮುಖ ಉದ್ದೇಶ ಕೆಳ ಹಂತದ ಸಿಬ್ಬಂದಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದು.ಪ್ರತಿಯೊಬ್ಬರ ಸಹಕಾರ ಪಡೆದು ಸುರಕ್ಷಿತ ವಾತಾವರಣ ನಿರ್ಮಿಸುವುದು.

ಇಲಾಖೆಯೊಳಗಿನ ಲೋಪಗಳ ಸುಧಾರಣೆಗೆ ತೆಗೆದುಕೊಳ್ಳುವ ಕ್ರಮಗಳೇನು ?
ಪೆÇಲೀಸರು ಎಲ್ಲಿ ಕಠಿಣವಾಗಿ ವರ್ತಿಸಬೇಕೋ ಅಲ್ಲಿ ಕಠಿಣವಾಗಿ ಇರಲೇಬೇಕು.ಹಾಗೆಂದು ಎಲ್ಲಾ ಕಡೆಯೂ ಕಠಿಣ ದಾಟಿಯಲ್ಲೇ ವರ್ತಿಸಿದರೆ ಜನಸ್ನೇಹಿ ವಾತಾವರಣ ನಿರ್ಮಾಣವಾಗುವುದಿಲ್ಲ. ಬೆಂಗಳೂರಿನಲ್ಲಿರುವ 1.38 ಕೋಟಿ ಜನರಲ್ಲಿ ಕಿಡಿಗೇಡಿಗಳ ಸಂಖ್ಯೆ ಬಹುಶಃ ಶೇ.1ರಷ್ಟು ಇರಬಹುದು.ಅವರ ವಿಷಯದಲ್ಲಿ ಯಾವುದೇ ಮುಲಾಜಿಲ್ಲ. ಕಿಡಿಗೇಡಿಗಳನ್ನು ಬಿಟ್ಟು ಉಳಿದವರ ಜತೆ ಪೆÇಲೀಸರು ಸೌಜನ್ಯದಿಂದ ವರ್ತಿಸಬೇಕು.

ಪ್ರತಿಯೊಬ್ಬ ನಾಗರಿಕರನು ಸಮವಸ್ತ್ರ ರಹಿತ ಪೆÇಲೀಸ್ ಆಗಿದ್ದರೆ ಪ್ರತಿಯೊಬ್ಬ ಪೆÇಲೀಸ್ ಕೂಡ ಸಮವಸ್ತ್ರ ದಾರಿ ನಾಗರಿಕನಾಗಿರುತ್ತಾನೆ ಎಂಬುದು ನನ್ನ ಅಭಿಪ್ರಾಯ.ಪೆÇಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸಮಾಜಘಾತುಕರು, ಅನ್ಯಾಯ ಮಾಡುವವರು ಹಾಗೂ ಅಪರಾಧಿಗಳ ಜತೆ ಶಾಮೀಲಾಗುವುದನ್ನು ನಾನು ಕ್ಷಮಿಸುವುದಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ಮುಲಾಜಿಲ್ಲದೆ ದಂಡಿಸಲಾಗುತ್ತದೆ.
ಹೊಸ ಸ್ವರೂಪದ ಅಪರಾಧಗಳ ನಿಯಂತ್ರಣ ಹೇಗೆ ?
ಡಿಜಟಲೀಕರಣ ಮತ್ತು ತಾಂತ್ರಿಕತೆ ಹೆಚ್ಚಾದಂತೆ ಅಪರಾಧಗಳ ಸ್ವರೂಪವೂ ಹೆಚ್ಚಾಗುತ್ತದೆ. ವೈಟ್‍ಕಾಲರ್ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ರೀತಿಯೇ ಬೇರೆಯಾಗಿರಬೇಕು.ದುರುದ್ದೇಶ ಪೂರ್ವಕವಲ್ಲದ ಸಣ್ಣ ಪ್ರಮಾಣದ ಅಪರಾಧಗಳ ಜತೆಗಿನ ನಡವಳಿಕೆಯೇ ಬೇರೆ ಇರಬೇಕು.ಈ ಎರಡು ವ್ಯತ್ಯಾಸಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಆರ್ಥಿಕ ಅಪರಾಧ ಮತ್ತು ರಿಯಲ್ ಎಸ್ಟೇಟ್ ಸಂಬಂಧಿತ ವಂಚನೆಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತೇವೆ. ಹೆಚ್ಚಿನ ಬಡ್ಡಿ ಆಸೆ, ಕಡಿಮೆ ಬೆಲೆಗೆ ಆಸ್ತಿ ಸಿಗುವ ದುರಾಸೆಗಾಗಿ ಜನ ಮೋಸ ಹೋಗಬಾರದು.ಅಧಿಕೃತ ಮತ್ತು ನಂಬಿಕಸ್ಥರ ಜೊತೆ ಮಾತ್ರ ವ್ಯವಹರಿಸಬೇಕು.ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ನಾವು ಹೆಚ್ಚಿನ ಮುತುವರ್ಜಿ ವಹಿಸಬೇಕಿದ್ದು, ಇದಕ್ಕೆ ರಾಜ್ಯ, ಕೇಂದ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ವಿವಿಧ ಸಂಸ್ಥೆಗಳ ಸಹಕಾರ ಅಗತ್ಯವಿದೆ.ಜತೆಗೆ ಜನರಲ್ಲಿ ಆಧುನಿಕ ಸ್ವರೂಪದ ಅಪರಾಧಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸಗಳನ್ನು ಮಾಡುತ್ತೇವೆ.

ಪೆÇಲೀಸ್‍ರಿಂದ ಜನ ಏನನ್ನು ನಿರೀಕ್ಷಿಸಬಹುದು ?
ನಮ್ಮ ಆದ್ಯತೆಗಳು ದುರ್ಬಲ ವರ್ಗಗಳಿಗೆ ರಕ್ಷಣೆ ಒದಗಿಸುವುದು.ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರು, ಯುವಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು. ಬೆಂಗಳೂರು ನಗರ ದಿನದ 24 ಗಂಟೆಗಳ ಕಾಲ ಎಚ್ಚರವಾಗಿರುತ್ತದೆ. ಮಧ್ಯರಾತ್ರಿಯಲ್ಲಿ ಹೆಣ್ಣುಮಗಳೊಬ್ಬಳು ನಿರ್ಭಯವಾಗಿ, ಸುರಕ್ಷಿತವಾಗಿ ಮನೆ ತಲುಪುವ ವಿಶ್ವಾಸ ಬಂದಾಗ ಮಾತ್ರ ನಾವು ಯಶಸ್ವಿಯಾದಂತೆ.

ಠಾಣೆಗೆ ಬಂದಂತಹ ದೂರುಗಳ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು. ಅನಗತ್ಯ ವಿಳಂಬಗಳನ್ನು ಮಾಡಿ ಜನರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು.ಈ ನಿಟ್ಟಿನಲ್ಲಿ ಎಲ್ಲಾ ಠಾಣೆಗಳಿಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ವೈಟ್‍ಕಾಲರ್ ಅಪರಾಧಗಳ ನಿಯಂತ್ರಣವನ್ನು ನಿರೀಕ್ಷಿಸಬಹುದೆ ?
ಆಸೆ-ದುರಾಸೆಯಿಂದಾಗಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತದೆ.ಆದ್ದರಿಂದ ಹೆಗ್ಗಣಗಳು, ಜಿರಳೆಗಳು, ಹುಳ-ಹುಪ್ಪಟೆಗಳು ಬೆಳೆದುಕೊಳ್ಳುತ್ತವೆ. ಮೊದಲು ಕಸವನ್ನು ತೆರವುಗೊಳಿಸಿ ಸ್ವಚ್ಛ ವಾತಾವರಣ ನಿರ್ಮಿಸಿದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಜನಸಾಮಾನ್ಯರಿಗೆ ಹೆಚ್ಚಿನ ತಿಳುವಳಿಕೆ ಮೂಡಿಸಲಾಗುವುದು.
ಶಾಂತಿಯುತ ಬಕ್ರೀದ್ ಆಚರಣೆಗೆ ತೆಗೆದುಕೊಂಡ ಕ್ರಮಗಳೇನು ?
ಬೆಂಗಳೂರು ಪೆÇಲೀಸರು ಅತ್ಯಂತ ಸಮರ್ಥರಿದ್ದಾರೆ.ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ. ಅಂತಹ ವಾತಾವರಣವೂ ಇಲ್ಲ. ಎಲ್ಲರೂ ಅತ್ಯಂತ ಸಂತೋಷದಿಂದ ಹಬ್ಬ ಆಚರಿಸಲಿ.ಪೆÇಲೀಸರು ನಿಮ್ಮೊಂದಿಗಿದ್ದಾರೆ.

ನಿಮ್ಮ ಅವಧಿಯಲ್ಲಿ ಬೆಂಗಳೂರಿನ ವರ್ಚಸ್ಸು ಹೆಚ್ಚಾಗಲಿದೆಯೇ?
ಖಂಡಿತಾ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿವೆ. ಬೆಂಗಳೂರಿಗೆ ದೇಶ-ವಿದೇಶಗಳಿಂದಲೂ ಜನ ಬಂದು ನೆಲೆಸುತ್ತಿದ್ದಾರೆ.ಉದ್ಯೋಗ, ಶಿಕ್ಷಣಕ್ಕಾಗಿ ಹೊರಗಿನಿಂದ ಬರುವವರಿಗೆ ಬೆಂಗಳೂರಿನಲ್ಲಿ ಅಸುರಕ್ಷಿತ ಭಾವನೆ ಸೃಷ್ಟಿಯಾಗಬಾರದು.ಹೀಗಾಗಿ ನಮ್ಮ ಮನೆಯ ರೀತಿ ಬೆಂಗಳೂರನ್ನು ಕಾಪಾಡಿಕೊಳ್ಳಬೇಕಿದೆ.

ರೌಡಿಸಮ್, ಡ್ರಗ್ಸ್ ಹಾವಳಿ ಹೆಚ್ಚಾಗಿದೆಯಲ್ಲಾ?
ಇನ್ನು ಮುಂದೆ ಜನರ ಶಾಂತಿ ಕದಡುವ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ನಡೆದರೂ ಅದನ್ನು ಚಿವುಟಿ ಹಾಕಲಾಗುತ್ತದೆ. ಹಫ್ತಾ ವಸೂಲಿ, ಜನರಿಗೆ ತೊಂದರೆ ಕೊಡುವ ರೌಡಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆಗೆ ಅವಕಾಶ ಕೊಡುವುದಿಲ್ಲ. ಯಾವುದೇ ರೀತಿಯ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ