ಬೆಂಗಳೂರು, ಆ.4-ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ಗಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಟಿಕೆಟ್ ಪಾಟ್ರ್ನರ್ ಆಗಿ ಪೇಟಿಯಂ ಇನ್ಸೈಡರ್ ಜತೆ ಒಪ್ಪಂದ ಮಾಡಿಕೊಂಡಿದ್ದು ಈಗ ಟೆಕೆಟ್ಗಳು ಮಾರಾಟಕ್ಕೆ ಲಭ್ಯವಿದೆ.
ದೇಶದ ಪ್ರತಿಷ್ಠಿತ ಟಿ20 ಟೂರ್ನಿಗಳಲ್ಲಿ ಒಂದಾಗಿರುವ ಕೆಪಿಎಲ್ ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಆರಂಭಗೊಳ್ಳಲಿದ್ದು, ನಂತರ 15 ದಿನಗಳ ಕಾಲ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ನಡೆಯಲಿದೆ. ಈ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ಟಿಕೆಟ್ಗಳ ಮೌಲ್ಯ 50ರಿಂದ 2,000ರೂ.ವರೆಗೆ ಇರಲಿದ್ದು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಕೂಡ 200ರಿಂದ 300ರೂ. ವರೆಗೆ ಇರುತ್ತದೆ. ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಕಡಿಮೆ ಮೊತ್ತದ ಟಿಕೆಟ್ಳ ಮೌಲ್ಯ 50ರೂ.ಆಗಿರುತ್ತದೆ.
ಪಂದ್ಯ ನಡೆಯುವ ಸ್ಥಳಗಳಲ್ಲಿನ ಟಿಕೆಟ್ ಕೌಂಟರ್ನಲ್ಲಿ ದೊರೆಯು ವ್ಯವಸ್ಥೇ ಮಾಡಲಾಗಿದ್ದು, ಇದರೊಂದಿಗೆ ಕ್ರಿಕೆಟ್ ಅಭಿಮಾನಿಗಳು ಪೇಟಿಯಂ ಇನ್ಸೈಡರ್ ಆ್ಯಪ್ ಮೂಲಕವೂ ಟಿಕೆಟ್ ಖರೀದಿಸಲೂ ಈ ಬಾರಿ ಅವಕಾಶ ಮಾಡಿಕೊಡಲಾಗಿದೆ.
ಕಳೆದ ವರ್ಷ ನಾವು ಆ್ಯಪ್ ಮೂಲಕವೇ ಉತ್ತಮ ರೀತಿಯಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡಿದ್ದೆವು, ಕರ್ನಾಟಕದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಆ್ಯಪ್ ಮೂಲಕ ಟಿಕೆಟ್ ಖರೀದಿಸುವಂತೆ ಉತ್ತೇಜನ ನೀಡುತ್ತಿದ್ದೇವೆ, ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಟಿಕೆಟ್ಳನ್ನು ಖರೀದಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದ್ದಾರೆ.