ಬಿಜೆಪಿಯಿಂದ ಜೆಡಿಎಸ್‍ಗೆ ಮತ್ತೊಂದು ಭಾರೀ ಶಾಕ್?

ಬೆಂಗಳೂರು, ಆ.4- ಈಗಾಗಲೇ ಮೂವರು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿ ಜೆಡಿಎಸ್‍ಗೆ ಮತ್ತೊಂದು ಭಾರೀ ಶಾಕ್ ಕೊಡಲು ಸಜ್ಜಾಗಿದೆ.

ಜೆಡಿಎಸ್‍ನ ಎಲ್ಲ 23 ಶಾಸಕರನ್ನು ಒಂದೇ ಬಂಚ್‍ನಲ್ಲಿ ಸೆಳೆಯಲು ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ.

ದೇವೇಗೌಡರ ಕುಟುಂಬದವರನ್ನು ಹೊರತುಪಡಿಸಿ ಎಲ್ಲ 23 ಶಾಸಕರನ್ನು ಬಿಜೆಪಿಗೆ ಕರೆದೊಯ್ಯಲು ಇಬ್ಬರು ಮಾಜಿ ಸಚಿವರೇ ಮುಂದಾಳತ್ವ ವಹಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಈ ತಂತ್ರಕ್ಕೆ ಕಾಂಗ್ರೆಸ್‍ನ ಕೆಲವರು ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

ಆಪರೇಷನ್ ಜೆಡಿಎಸ್ ಫಿನಿಷ್ ಕಾರ್ಯ ನಡೆದರೆ ಮುಂದಿನ ದಿನಗಳಲ್ಲಿ ಬಿಜೆಪಿ ವರ್ಸ್‍ಸ್ ಕಾಂಗ್ರೆಸ್ ಎಂಬ ಸಮೀಕರಣ ಅಸ್ತಿತ್ವಕ್ಕೆ ಬರಬೇಕೆಂದು ಈ ನಾಯಕರು ಕೈ ಜೋಡಿಸಲು ಕಾರಣ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ