ಮನಿಲ್ಲಾ, ಆ.2– ಭಾರತದ ಹಿರಿಯ ಪತ್ರಕರ್ತ ರವೀಶ್ಕುಮಾರ್ ಅವರಿಗೆ ಪ್ರತಿಷ್ಠಿತ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಘೋಷಿಸಲಾಗಿದೆ.
ಏಷಿಯಾದ ನೋಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎನ್ಡಿ ಟಿವಿ ಹಿರಿಯ ಕಾರ್ಯಕಾರಿ ಸಂಪಾದಕ ರವೀಶ್ಕುಮಾರ್ ಅವರಿಗೆ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವೂ ಫಿಲಿಫೈನ್ಸ್ ರಾಜಧಾನಿ ಮನಿಲ್ಲಾದಲ್ಲಿಂದು ಘೋಷಿಸಿತು.
ವಿದ್ಯುನ್ಮಾನ ಪತ್ರಿಕೋದ್ಯಮ ಕ್ಷೇತ್ರದಲ್ಲಿ 44 ವರ್ಷಗಳು ರವೀಶ್ಕುಮಾರ್ ಸಲ್ಲಿಸಿರುವ ಸೇವೆನಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಬಿಹಾರದ ಜಿತ್ವರ್ಪುರ್ ಎಂಬ ಗ್ರಾಮದಲ್ಲಿ ಜನಿಸಿದ ರವೀಶ್ಕುಮಾರ್ 1996ರಲ್ಲಿ ನ್ಯೂಡೆಲ್ಲಿ ನೆಟ್ವಕ್ರ್ಸ್(ಎನ್ಡಿಟಿವಿ) ವಾರ್ತಾವಾಹಿನಿಗೆ ಸೇರ್ಪಡೆಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಎನ್ಡಿಟಿವಿಯಲ್ಲಿ ಇವರು ನಿರೂಪಕರಾಗಿ ನಡೆಸಿ ಕೊಡುವ ಪ್ರೈಮ್ ಟೈಮ್ ಶೀರ್ಷಿಕೆಯ ಕಾರ್ಯಕ್ರಮ ಅಪಾರ ಜನಮೆಚ್ಚುಗೆ ಪಡೆದಿದ್ದು, ಸಾಮಾಜಿಕ ಸಮಸ್ಯೆಗಳು ಮತ್ತು ಪ್ರಚಲಿತ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತವೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿವರ್ಷ ಏಷಿಯಾ ಖಂಡದ ಅತ್ಯಂತ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.