ಮೋಗಾ (ಪಂಜಾಬ್) , ಆ.3 – ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ.
ಮೋಗಾದ ಬಘಾನ್ಪುರಾನಾ ಪೊಲೀಸ್ಠಾಣೆ ವ್ಯಾಪ್ತಿಯ ನಾಥುವಳ್ ಗ್ರಾಮದಲ್ಲಿ ಈ ಭೀಕರ ಘಟನೆ ಜರುಗಿದೆ.
ಸಂದೀಪ್ ಸಿಂಗ್(27) ಎಂಬಾತ ರಿವಾಲ್ವಾರ್ನಿಂದ ತನ್ನ ಅಜ್ಜಿ, ತಂದೆ, ತಾಯಿ, ಸಹೋದರಿ ಮತ್ತು ತನ್ನ ಹೆಣ್ಣು ಮಗುವಿನ ಮೇಲೆ ಗುಂಡು ಹಾರಿಸಿ ಕೊಂದು ನಂತರ ತಾನೂ ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿರುವ ತಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಟುಂಬ ಕಲಹವೇ ಈ ಭೀಕರ ಹತ್ಯೆ ಮತ್ತು ಆತ್ಮಹತ್ಯೆಗೆ ಕಾರಣವೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.