ತೀವ್ರ ಕುತೂಹಲ ಕೆರೆಳಿಸಿರುವ ಟೀಮ್ ಇಂಡಿಯಾ ಕೋಚ್ ಪಟ್ಟಕ್ಕೆ ರಾಶಿ ರಾಶಿ ಅರ್ಜಿಗಳು ಬಿಸಿಸಿಐ ಕಚೇರಿ ತಲುಪಿದೆ. ವಿಶ್ವದ ಬಲಿಷ್ಠ ತಂಡವಾಗಿರುವ ಟೀಮ್ ಇಂಡಿಯಾಗೆ ಕೋಚ್ ಆಗಲು ಭಾರೀ ಪೈಪೋಟಿ ನಡೆದಿವೆ. ಟೀಮ್ ಇಂಡಿಯಾದ ಹೆಡ್ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಸೇರಿದಂತೆ ಇತರೆ ಸಹಾಯಕ ಹುದ್ದೆಗಳಿಗೆ ಬಿಸಿಸಿಐ ಅರ್ಜಿ ಆಹ್ವಾನಿಸತ್ತು.ಟೀಮ್ ಇಂಡಿಯಾದ ಹೆಡ್ ಕೋಚ್ ಪಟ್ಟದ ಮೇಲೆ ಘಟಾನುಘಟಿ ಕೋಚ್ಗಳು ಕಣ್ಣಿಟ್ಟಿದ್ದು ಟೀಮ್ ಇಂಡಿಯಾ ಕೋಚ್ ರೇಸ್ನಲ್ಲಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾ ನೂತನ ಕೋಚ್ ಪಟ್ಟ ಅಲಂಕರಿಸಲು ಮಾಜಿ ಆಟಗಾರರು ನಾ ಮುಂದು ತಾ ಮುಂದು ಅಂತ ದುಂಬಾಲು ಬಿದ್ದಿದ್ದಾರೆ.
ಬಿಸಿಸಿಐಗೆ ಸಲ್ಲಿಕೆಯಾಗಿವೆ 2 ಸಾವಿರ ಅರ್ಜಿಗಳು..!
ಸದ್ಯ ಟೀಮ್ ಇಂಡಿಯಾದ ಕೋಚ್ ಆಗಿರುವ ರವಿಶಾಸ್ತ್ರಿ ಅವಧಿ ಪೂರ್ಣಗೊಳ್ಳಲಿದೆ. ವಿಂಡೀಸ್ ಟೂರ್ ಬಳಿಕ ನೂತನ ಕೋಚ್ ನೇಮಿಸಬೇಕೆಂಬ ಹಂಬಲದಲ್ಲಿರುವ ಬಿಸಿಸಿಐ, ತಂಡದ ಮುಖ್ಯ ಕೋಚ್ ಸೇರಿದಂತೆ ಸಹಾಯಕ ಕೋಚ್ಗಳ ನೇಮಕಾತಿಗೆ ಅರ್ಜಿ ಕರೆದಿತ್ತು. ಆದರೆ ಬರೀ ಹೆಡ್‌ಕೋಚ್ ಸ್ಥಾನಕ್ಕಾಗಿಯೇ ಬಿಸಿಸಿಐಗೆ ಸುಮಾರು 2000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ವರದಿ ಆಗಿದೆ.
ಹೆಡ್ ಕೋಚ್ ರವಿಶಾಸ್ತ್ರಿಗೆ ಇಬ್ಬರು ದಿಗ್ಗಜರ ಸವಾಲು..!
ಇನ್ನು ಆರಂಭದಲ್ಲಿ ಶ್ರೀಲಂಕಾ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಪ್ರಮುಖ ಆಕಾಂಕ್ಷಿ ಎನ್ನಲಾಗಿತ್ತು. ಆದರೆ ಜಯವರ್ಧನೆ ಇನ್ನೂ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ ಮುಖ್ಯ ಕೋಚ್ ಹುದ್ದೆಗೆ ಬಂದಿರುವ ಅರ್ಜಿಗಳಲ್ಲಿ ಆಸ್ಟ್ರೇಲಿಯನ್ ಮಾಜಿ ಆಲ್ರೌಂಡರ್ ಟಾಮ್ ಮೂಡಿ, ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹಸನ್ ಪ್ರಮುಖರಾಗಿದ್ದಾರೆ. ಜೊತೆಗೆ ಟೀಮ್ ಇಂಡಿಯಾದ ಕೋಚ್ ರವಿಶಾಸ್ರ್ತಿಗೆ ಪ್ರಬಲ ಪೈಪೋಟಿ ನೀಡುವವರು ಎಂದು ಹೇಳಲಾಗ್ತಿದೆ. ಅಲ್ಲದೆ ಭಾರತದ ರಾಬಿನ್ ಸಿಂಗ್ ಮತ್ತು ಲಾಲ್‌ಚಂದ್ ರಜಪೂತ್ ಕೂಡ ಈ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿಯೇ ಕೊಹ್ಲಿ ಬೆಂಬಲದ ಹೊರತಾಗಿಯೂ ರವಿಶಾಸ್ತ್ರಿ ಪ್ರಬಲ ಪೈಪೋಟಿ ಎದುರಿಸುವ ನಿರೀಕ್ಷೆ ಇದೆ ಎನ್ನಲಾಗ್ತಿದೆ.
ಇನ್ನೊಂದು ಮೂಲಗಳ ಪ್ರಕಾರ ಕೋಚ್ ಆಗಿ ರವಿ ಶಾಸ್ತ್ರಿ ಒಳ್ಳೆಯ ಪರ್ಫಾಮನ್ಸ್ ಕೊಟ್ಟಿದ್ದರಿಂದ ಇನ್ನು ಎರಡು ವರ್ಷಗಳ ಕಾಲ ಅಂದ್ರೆ ಮುಂಬರುವ ವಿಶ್ವ ಟಿ20 ಟೂರ್ನಿವರೆಗೂ ಕೋಚ್ ಆಗಿ ಮುಂದುವರೆಯಲು ಅವಕಾಶ ನೀಡಬಹುದೆಂದು ಹೇಳಲಾಗುತ್ತಿದೆ.
ಬೌಲಿಂಗ್ ಕೋಚ್ ಹುದ್ದೆ ಮೇಲೆ ವೆಂಕಟೇಶ್ ಪ್ರಸಾದ್ ಕಣ್ಣು..!
ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿಸಲ್ಲಿದ್ದಾರೆ. 33 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನಾಡಿರುವ ಅನುಭವ ಇರುವ ಪ್ರಸಾದ್, 3 ವರ್ಷ ಭಾರತದ ಕಿರಿಯ ತಂಡದ ಆಯ್ಕೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹಾಗೂ 2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿಯೂ ನಾಲ್ಕು ವರ್ಷ ಚೆನ್ನೈ ಸೂಪರ್ ಕಿಂಗ್ಸ್, 2 ವರ್ಷ ಆರ್ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಸದ್ಯ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಮುಂದುವರಿಯರಿಯಲಿದ್ದಾರೆ ಎಂದು ಸ್ವತಃ ಬಿಸಿಸಿಐ ಹೇಳಿತ್ತು. ಈ ನಡುವೆ ವೆಂಕಟೇಶ್ ಪ್ರಸಾದ್ ಅರ್ಜಿ ಸಲ್ಲಿಸಿರುವ ಕಾರಣ ಭರತ್ ಅರುಣ್ ಪೈಪೋಟಿ ಎದುರಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇನ್ನು ಬ್ಯಾಟಿಂಗ್ ಕೋಚ್ ಹುದ್ದೆಗೆ ಪ್ರವೀಣ್ ಅಮ್ರೆ ಅರ್ಜಿ ಸಲ್ಲಿಸಿದ್ರೆ, ಫೀಲ್ಡಿಂಗ್ ಕೋಚ್ ಹುದ್ದೆಗೆ ಜಾಂಟಿ ರೋಡ್ಸ್ ಅರ್ಜಿ ಸಲ್ಲಿದ್ದಾರೆ.. ಇವರೊಂದಿಗೆ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್ ಕೂಡ ರೇಸ್ ನಲ್ಲಿದ್ರು. ಇದೀಗ ಸಲ್ಲಿಕೆಯಾಗಿರುವ ಅರ್ಜಿಗಳನ್ನ ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿ ಪರಿಶೀಲನೆ ನಡೆಸಿ ಇನ್ನು ಕೆಲವೇ ದಿನಗಳಲ್ಲಿ ಸಂದರ್ಶನ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.