ನವದೆಹಲಿ, ಆ.1-ಕಾನೂನು ಆಗಿ ಪರಿವರ್ತಿಸುವ ಉದ್ದೇಶದಿಂದ ಸಂಸತ್ತಿನಲ್ಲಿ ಅಂಗೀಕರಿಸಲಾದ ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ತಿಳಿಸಿದೆ.
ವಿವಾಹಿತ ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಸಮಸ್ಯೆಗಳಿಗೆ ರಕ್ಷಣೆ ನೀಡುವ ಈ ವಿಧೇಯಕದಲ್ಲಿ ತಮ್ಮ ಪತ್ನಿಯರಿಗೆ ಸ್ಥಳದಲ್ಲೇ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವ ಪತಿಯರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಲೋಕಸಭೆಯಲ್ಲಿ ಈ ಹಿಂದೆ ಅನುಮೋದನೆ ಪಡೆದಿದ್ದ ಈ ಮಸೂದೆಗೆ ಮಂಗಳವಾರ ರಾಜ್ಯಸಭೆ ಅಂಗೀಕಾರ ನೀಡಿತ್ತು.
ತ್ರಿವಳಿ ತಲಾಖ್ನನ್ನು ಕ್ರಿಮನಲ್ ಅಪರಾಧವನ್ನಾಗಿ ಪರಿಗಣಿಸುವ ಈ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ಉಭಯ ಸದನಗಳಿಂದ ಅಂಗೀಕಾರ ದೊರೆತಂತಾಗಿತ್ತು.
ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆಗೆ ಕಳೆದ ವಾರ ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.
ಈಗ ರಾಷ್ಟ್ರಪತಿ ಅವರು ಈ ಮಸೂದೆಗೆ ಅಂಕಿತ ಹಾಕುವುದರೊಂದಿಗೆ, ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಸ್ಥಳದಲ್ಲೇ ತ್ರಿವಳಿ ತಲಾಖ್ ನೀಡುವ ಆಚರಣೆ ಶಿಕ್ಷಾರ್ಹ ಅಪರಾಧª. ಇದಕ್ಕಾಗಿ ಮೂರು ವರ್ಷಗಳವರೆಗೆ ಸಜೆ ವಿಧಿಸಲಾಗುತ್ತದೆ.