
ಬೆಂಗಳೂರು, ಆ.1- ಮೆಟ್ರೋ ಹಳಿಗಳ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಆ.3ರ ರಾತ್ರಿ 9.30ರಿಂದ ಆ.4ರ ಬೆಳಗ್ಗೆ 11 ಗಂಟೆವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೈಯಪ್ಪನಹಳ್ಳಿ-ಎಂ.ಜಿ.ರೋಡ್ ಮಾರ್ಗದಲ್ಲಿ ಮೆಟ್ರೋ ಹಳಿಗಳ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಈ ಮಾರ್ಗದಲ್ಲಿ ಆ.3ರ ರಾತ್ರಿ 9.30ರಿಂದ 4ರ ಬೆಳಗ್ಗೆ 11 ಗಂಟೆವರೆಗೆ ಮೆಟ್ರೋ ರೈಲು ಲಭ್ಯವಿರುವುದಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.