ಚರ್ಚ್ ಆವರಣದಲ್ಲಿ ಮೆಟ್ರೋನಿಂದ ಕಾನೂನು ಬಾಹಿರವಾಗಿ ಕಾಮಗಾರಿ

ಬೆಂಗಳೂರು, ಆ.1- ಆಲ್ ಸೇಂಟ್ಸ್ ಚರ್ಚ್ ಆವರಣವನ್ನು ಮೆಟ್ರೋ ರೈಲು ನಿಗಮವು ವಶಪಡಿಸಿಕೊಂಡು ಕಾನೂನು ಬಾಹಿರವಾಗಿ ಕಾಮಗಾರಿ ಮಾಡಲು ಮುಂದಾಗಿರುವುದನ್ನು ಆಲ್ ಸೇಂಟ್ಸ್ ಚರ್ಚ್ ವೆಲ್ಫೇರ್ ಅಸೋಶಿಯೇಷನ್ ವಿರೋಧಿಸಿದೆ.

ಸುದ್ದಿಗೋಷ್ಠಿಯಲ್ಲಿ ಪರಿಸರ ಬೆಂಬಲ ಸಮೂಹದ ಸಂಯೋಜಕ ಲಿಯೋ ಎಫ್.ಸಾಲ್ಡಾನ ಮಾತನಾಡಿ, ಸುಮಾರು 150 ವರ್ಷಗಳ ಹಿಂದಿನ ಧಾರ್ಮಿಕ ಮತ್ತು ಸಾಂಸ್ಕøತಿಕ ಕೇಂದ್ರವಾಗಿರುವ ಈ ಚರ್ಚ್ ಆವರಣದಲ್ಲಿ 150ಕ್ಕೂ ಹೆಚ್ಚು 200 ವರ್ಷಗಳ ಮರಗಳು ಇವೆ. ಅವುಗಳನ್ನು ಯಾವುದೇ ಕಾರಣಕ್ಕೂ ಪರಿಸರ ಇಲಾಖೆಯ ಅನುಮತಿ ಇಲ್ಲದೆ ಕಡಿಯಬಾರದು ಎಂದು ಒತ್ತಾಯಿಸಿದರು.

ಮೆಟ್ರೋ ಕಾಮಗಾರಿ ಆರಂಭವಾದರೆ. ಆ ಕಾಮಗಾರಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ಅಲ್ಲೇ ಹಾಕಲಾಗುತ್ತದೆ. ಇದರಿಂದ ಪ್ರಾರ್ಥನೆಗೆ ಬರುವ ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.

ಹೈಕೋರ್ಟ್ ಇಲ್ಲಿ ಮೆಟ್ರೋ ಕಾಮಗಾರಿ ನಡೆಸಬಾರದು ಎಂದು ಆದೇಶ ನೀಡಿದ್ದರೂ ಸಹ ಆದೇಶವನ್ನು ಉಲ್ಲಂಘನೆ ಮಾಡಿ ಕಾಮಗಾರಿ ಮಾಡಲು ಹೊರಟಿರುವುದು ಕಾನೂನು ಬಾಹಿರವಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಮೆಟ್ರೋ ರೈಲು ನಿಗಮದವರಿಗೆ ಶೀಘ್ರವೇ ಬೇರೆ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಬೇಕೆಂದು ಸಾಲ್ಡಾನ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ