ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 1 ವಾರ ಕಳೆದಿದೆ. ಸಚಿವ ಸಂಪುಟ ರಚನೆ ಮಾಡಲು ಬಿಎಸ್ವೈ ನಿರ್ಧರಿಸಿದ್ದು, ಯಾರ್ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಕುತೂಹಲ ಇದೆ. ಆಗಸ್ಟ್ 4ರ ಸಂಜೆ ಅಥವಾ 5ರ ಬೆಳಗ್ಗೆ ಯಡಿಯೂರಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆಗೆ ಕೂತು ಮಾತುಕತೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಬಳಿಕ ಅಂದರೆ ಆಗಸ್ಟ್ 8 ಅಥವಾ 10ಕ್ಕೆ ಸಚಿವ ಸಂಪುಟ ರಚನೆ ಆಗಲಿದೆ.
ಸಚಿವ ಸಂಪುಟದ ಸಂಭಾವ್ಯರ ಪಟ್ಟಿ ಇಂತಿದೆ:
1. ಶ್ರೀರಾಮುಲು- ಚಿತ್ರದುರ್ಗ ಹಾಗೂ ಎಸ್ಟಿ ಕೋಟಾ. ಹೈಕಮಾಂಡ್ ಒಪ್ಪಿದರೆ ಶ್ರೀರಾಮುಲುಗೆ ಡಿಸಿಎಂ ಪಟ್ಟ. ಇಲ್ಲದೇ ಹೋದರೆ ಪ್ರಮುಖ ಖಾತೆ ಸಿಗುವ ಸಾಧ್ಯತೆ ಇದೆ.
2. ಮಾಧುಸ್ವಾಮಿ- ಲಿಂಗಾಯತ ಹಾಗೂ ತುಮಕೂರು ಜಿಲ್ಲಾ ಕೋಟಾ
3. ಉಮೇಶ್ ಕತ್ತಿ- ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಕೋಟಾ.
4. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ ಹಾಗೂ ಕುರುಬರ ಕೋಟಾ.
5. ಗೋವಿಂದ ಕಾರಜೋಳ- ದಲಿತ ಹಾಗೂ ಬಿಜಾಪುರ ಕೋಟಾ.
6. ಆರ್. ಅಶೋಕ್- ಬೆಂಗಳೂರು ಹಾಗೂ ಒಕ್ಕಲಿಗ ಕೋಟಾ
7. ಡಾ. ಅಶ್ವತ್ಥ ನಾರಾಯಣ- ಬೆಂಗಳೂರು ಹಾಗೂ ಒಕ್ಕಲಿಗ ಕೋಟಾ
8. ಬಸವರಾಜ್ ಬೊಮ್ಮಾಯಿ- ಲಿಂಗಾಯತ ಹಾಗೂ ಉತ್ತರ ಕರ್ನಾಟಕದ ಕೋಟಾ.
9. ಬಸವರಾಜ್ ಪಾಟೀಲ್ ಯತ್ನಾಳ್, ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಕೋಟಾ.
10. ನಾಗೇಶ್, ಪಕ್ಷೇತರ ಶಾಸಕರು ಹಾಗೂ ಕೋಲಾರ ಜಿಲ್ಲಾ ಕೋಟಾ.
11. ಸಿ.ಟಿ.ರವಿ, ಒಕ್ಕಲಿಗರು ಹಾಗೂ ಚಿಕ್ಕಮಗಳೂರು ಜಿಲ್ಲಾ ಕೋಟಾ.
12. ರೇಣುಕಾಚಾರ್ಯ, ಲಿಂಗಾಯತ ಹಾಗೂ ದಾವಣಗೆರೆ ಜಿಲ್ಲೆಯ ಕೋಟಾ.
ಹೈಕಮಾಂಡ್ ಒಪ್ಪಿಗೆ ನೀಡಿದರೆ ಸಚಿವ ಸಂಪುಟದ ಪಟ್ಟಿ ಅಂತಿಮಗೊಳ್ಳಲಿದೆ. ಇಲ್ಲದೆ ಹೋದರೆ ಕೊನೆ ಕ್ಷಣದಲ್ಲಿ ಒಂದೆರಡು ಹೆಸರುಗಳು ಬದಲಾವಣೆಯಾಗಲಿವೆ. ಆರಂಭದಲ್ಲಿ 10 ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪಕ್ಷೇತರ ಹಾಗೂ ರೆಬೆಲ್ ಶಾಸಕರ ರಾಜೀನಾಮೆ ವಿವಾದ ಬಗೆಹರಿದ ಬಳಿಕ ಅತೃಪ್ತರಿಗೂ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ಮತ್ತೊಂದು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ನಿರ್ಧಾರ ಮಾಡಲಾಗಿದೆ.