ನವದೆಹಲಿ,ಆ.1– ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂಕಿಅಂಶ ತಿಳಿಸಿವೆ.
ಕಳೆದ ತಿಂಗಳಷ್ಟೇ ದೇಶಾದ್ಯಂತ ಶೇ.30ರಿಂದ 32ರಷ್ಟು ಮಳೆ ಕೊರತೆಯಾಗಲಿದೆ ಎಂದು ಐಎಂಡಿ ತಿಳಿಸಿತ್ತು. ಅಲ್ಲದೆ ಜಲೈ ಅಂತ್ಯಮತ್ತು ಆಗಸ್ಟ್ ತಿಂಗಳ ಆರಂಭದಲ್ಲಿ ಉತ್ತಮ ಮಳೆಯಾಗಲಿದೆಯೆಂದು ಮುನ್ಸೂಚನೆ ನೀಡಿತ್ತು.
ಜೂನ್ 1 ರಿಂದ ಆರಂಭಗೊಂಡು ಜುಲೈ 31ಕ್ಕೆ ಕೊನೆಗೊಂಡ ಮುಂಗಾರು ಮಳೆ ಋತುವಿನ ಅವಧಿಯಲ್ಲಿ ಸಾಧಾರಣ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ಎರಡನೇ ಬಾರಿಗೆ ಸರಾಸರಿಗಿಂತ ಇದು ಅಧಿಕವಾಗಿದೆ. ಇದರಿಂದ ರೈತರಿಗೆ ಬಿತ್ತನೆಗೆ ಅನುಕೂಲವಾಗಲಿದೆ ಎಂದು ತಿಳಿಸಿದೆ.
ಕೃಷಿ ಉತ್ಪಾದನೆ ಮತ್ತು ಆರ್ಥಿಕ ಬೆಳವಣಿಗೆಗೆ ಮುಂಗಾರು ಮಳೆ ನಿರ್ಣಾಯಕವಾಗಿದೆ. ಭಾರತದ ಕೃಷಿ ಭೂಮಿಗಳಲ್ಲಿ ಶೇ.55ರಷ್ಟು ಮಳೆಯಾಶ್ರಿತವಾಗಿದೆ ಮತ್ತು ಕೃಷಿಯು 2.5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಶೇಕಡಾ 15ರಷ್ಟನ್ನು ಅವಲಂಬಿಸಿದೆ. ಇದು ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಜುಲೈ 31ರ ಬುಧವಾರ ಸಂಜೆ ದಾಖಲಾದ ಅಂಕಿ ಅಂಶಗಳ ಮಾಹಿತಿಯಂತೆ 50 ವರ್ಷಗಳ ಸರಾಸರಿಗಿಂತ ದೇಶದಲ್ಲಿ ಶೇ.42ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆಯ (ಐಎಂಡಿ) ಅಂಕಿ ಅಂಶಗಳು ತಿಳಿಸಿವೆ.