ಬೆಂಗಳೂರು,ೂ.28- ಶ್ರೀ ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಮಾಗಡಿರಸ್ತೆಯಲ್ಲಿರುವ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಸಂಜೆ 5 ಗಂಟೆಯಿಂದ 9ರವೆಗೆ ಸುಹಾಸಿನಿಯರಿಂದ ಗಂಗೆಪೂಜೆ, ಸ್ವಸ್ತಿ ಪುಣ್ಯವಾಹನ, ಅಂಕುರಾರ್ಪಣ, ಧ್ವಜಾರೋಹಣ, ವಾಸ್ತು ಹಾಗೂ ಶಾಂತಿ ಪೂಜೆ ನಡೆಯಲಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ನವಗ್ರಹ ಹೋಮ, ರುದ್ರಾಭಿಷೇಕ ನಡೆಯಲಿದ್ದು, 11 ಗಂಟೆಗೆ ಸಂಗೀತ ವಿದ್ವಾನ್ ಸಂತವಾಣಿ ಸುಧಾಕರ್ ಹಾಗೂ ಕು.ದತ್ತಶ್ರೀ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಡಾ.ಶ್ರೀ ವಿಶ್ವಸಂತೋಷ್ ಭಾರತಿ ಶ್ರೀ ಪಾದರು, ವಿದ್ವಾನ್ ಶ್ರೀಮಠಂ ನಾಗರಾಜುಸ್ವಾಮಿ, ಡಾ.ಶ್ರೀ ಶಂಕರ್ ಗುರೂಜಿ ಹಾಗೂ ಶ್ರೀ ಆದಿತ್ಯ ನಂದನ್ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ , ಶಾಸಕ ಎಸ್.ಟಿ.ಸೋಮಶೇಖರ್, ನಂದಿ ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಸಿ.ಚಂದ್ರಶೇಖರ್ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮುಜರಾಯಿ ಸಚಿವ ಪರಮೇಶ್ವರ ನಾಯಕ್, ಶಾಸಕ ಎಂ.ಕೃಷ್ಣಪ್ಪ , ನಿವೃತ್ತ ನ್ಯಾಯಾಧೀಶ ಎಸ್.ಎಂ.ಶಿವನಗೌಂಡರ್, ಕರ್ನಾಟಕ ಮಾಹಿತಿ ಕೇಂದ್ರ ಎಲ್.ಕೃಷ್ಣಮೂರ್ತಿ, ಉಪಾಧ್ಯಕ್ಷ ಡಾ.ನಂಜುಂಡೇಶ್, ಬಿಬಿಎಂಪಿ ಸದಸ್ಯ ಡಿ.ರಾಜಣ್ಣ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.