ಬೆಂಗಳೂರು,ಜೂ.29- ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಇಂದು ಸಹ ಐಎಂಎಗೆ ಸೇರಿದ ವಿವಿಧ ಫಾರ್ಮಸಿಗಳ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ನಗರದ ವಿವಿಧ ಕಡೆ ಐಎಂಎ ಸಂಸ್ಥೆಗೆ ಸೇರಿದ ಫ್ರಂಟ್ಲೈನ್ ಫಾರ್ಮಸಿಗಳ ಮೇಲೆ ಎಸ್ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿ ವಿವಿಧ ವಸ್ತುಗಳನ್ನು ಹಾಗೂ ಪ್ರಮುಖ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಈಗಾಗಲೇ ಐಎಂಎಗೆ ಸೇರಿದ ಗೋದಾಮು, ಅಂಗಡಿ, ಫಾರ್ಮಸಿಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಔಷಧಿಗಳು, ಸೌಂದರ್ಯವರ್ಧಕಗಳು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ.