ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ದದಲ್ಲಿ ಕೊಹ್ಲಿ ಸೈನ್ಯ ಗೆಲುವಿನ ನಾಗಲೋಟದಲ್ಲಿ ಮುಂದುವರೆದಿದೆ. ಆಡಿದ ಐದು ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದ್ರೂ ತಂಡದ ಬ್ಯಾಟಿಂಗ್ ವೈಫಲ್ಯ ತಂಡದ ತಾಕತ್ತನ್ನ ಮತ್ತೆ ಮತ್ತೆ ಪ್ರಶ್ನಿಸುವಂತಾಗಿದೆ. ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧ ಗೆದ್ದಿದ ಕೊಹ್ಲಿ ಸೈನ್ಯ ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧವೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ಮೊನ್ನೆ ಕೆರೆಬಿಯನ್ನರ ವಿರುದ್ಧದ ಕದನದಲ್ಲಿ ಕ್ಯಾಪ್ಟನ್ ಕೊಹ್ಲಿ ಮತ್ತು ಧೋನಿ ಅರ್ಧ ಶತಕದ ನೆರವಿನಿಂದ ಟೀಮ್ ಇಂಡಿಯಾ 268 ರನ್ ಆeಛಿeಟಿಣ ಸ್ಕೋರ್ ಕಲೆ ಹಾಕಲು ನೆರವಾದ್ರು. ತಂಡದ ನೆರವಾಗಬೇಕಿದ್ದ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳು ಒಂದಂಕಿ ರನ್ಗಳನ್ನ ಬಾರಿಸಿ ಪೆವಲಿಯನ್ ಸೇರಿದ್ರು.
ಭಾರೀ ಚರ್ಚೆಯಾಗುತ್ತಿರುವ ನಂ.4 ಸ್ಲಾಟ್ನಲ್ಲಿ ಆಡುತ್ತಿರುವ ಆಲ್ರೌಂಡರ್ ವಿಜಯ್ ಶಂಕರ್ ಮೊನ್ನೆ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿ ವೈಫಲ್ಯ ಮುಂದುವರೆಸಿದ್ರು. ವಿಜಯ್ ಆಟ ನೋಡಿದವರೆಲ್ಲ ವಿಜಯ್ ಬಿಟ್ರೆ ತಂಡದಲ್ಲಿ ಬೇರ್ಯಾವ ಬ್ಯಾಟ್ಸ್ಮನ್ಗಳು ಇಲ್ವಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಆಲ್ರೌಂಡರ್ ವಿಜಯ್ ಶಂಕರ್ ಬ್ಯಾಕ್ ಟು ಬ್ಯಾಕ್ ಫ್ಲಾಪ್
ವಿಜಯ್ ಶಂಕರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಈ ವೇಳೆ ಎಂ.ಎಸ್.ಕೆ ಪ್ರಸಾದ್, ಮೂರು ವಿಭಾಗಗಳಲ್ಲು ಶಂಕರ್ ಕಮಾಲ್ ಮಾಡಬಲ್ಲ ಆಟಗಅರ ಎಂದಿದ್ರು. ಅಂದು ವಿಜಯ್ ಆಯ್ಕೆಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಅಂಶಗಲು ನೆರವಾಗಿದ್ವು.. ಆದ್ರೆ, ವಿಶ್ವಕಪ್ನಲ್ಲಿ ಮಾತ್ರ ವಿಜಯ್ ಶಂಕರ್ ವ್ಯತಿರಿಕ್ತರಾಗಿದ್ದಾರೆ. ಗಾಯಾಳು ಧವನ್ ರೂಪದಲ್ಲಿ ಸಿಕ್ಕ ಅವಕಾಶವನ್ನ ಬಳಸಿಕೊಳ್ಳದೇ ಪದೇ ಪದೇ ಫ್ಲಾಪ್ ಆಗ್ತಿದ್ದಾರೆ. ವಿಜಯ್ ಶಂಕರ್ ಫ್ಲಾಪ್ ಫರ್ಪಾಮೆನ್ಸ್ ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಗಿದೆ. ಪರಿಣಾಮ ಭಾರತ ಉತ್ತಮ ಆರಂಭವನ್ನು ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಸಂಕಷ್ಟ ಎದುರಿಸುತ್ತಿದೆ. ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ವಿಂಡೀಸ್ ವಿರುದ್ಧ ತಂಡಕ್ಕೆ ಆಸರೆಯಾಗಬೇಕಿದ್ದ ಶಂಕರ್14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗಾಯಾಳು ಶಿಖರ್ ಧವನ್ ಟೂರ್ನಿಯಿಂದಲೇ ಹೊರನಡೆದ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ಆರಂಭಿಕನಾಗಿ ಬಡ್ತಿ ಪಡೆದಿದ್ದರು. ಇದರಿಂದಾಗಿ ನಾಲ್ಕನೇ ಕ್ರಮಾಂಕದ ಸಿಕ್ಕ ಅವಕಾಶವನ್ನ ಮಾತ್ರ ವಿಜಯ್ ಶಂಕರ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ..
ಪಾಕ್ ವಿರುದ್ಧ ಮೊದಲ ಪಂದ್ಯವಾಡಿದ ವಿಜಯ್ ಶಂಕರ್ ಕೇವಲ 15 ರನ್ಗಳಿಸಿದ್ರೆ. ಕ್ರಿಕೆಟ್ ಶಿಶು ವಿರುದ್ಧ 29 ರನ್ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದ್ರು.. ಇನ್ನೂ ವಿಂಡೀಸ್ ವಿರುದ್ಧ 14 ರನ್ಗಳಿಗೆ ತಮ್ಮ ಇನ್ನಿಂಗ್ಸ್ಗೆ ಅಂತ್ಯವಾಡಿದ್ರು..
ಇನ್ನೂ ಪಾಕ್ ವಿರುದ್ಧ ಸ್ವಿಂಗ್ ಕಿಂಗ್ ಭುವನೇಶ್ವರ್ ಅನುಪಸ್ಥಿತಿಯಲ್ಲಿ ಬೌಲಿಂಗ್ ಮಾಡಿದ ವಿಜಯ್ ಶಂಕರ್, 2 ಪ್ರಮುಖ ವಿಕೆಟ್ ಪಡೆದ್ರು.. ಆದ್ರೆ, ನಂತರ ನಡೆದ ಅಫ್ಘಾನ್ ಹಾಗೂ ವಿಂಡೀಸ್ ವಿರುದ್ಧ ಬೌಲಿಂಗ್ ಸಹ ನೀಡಲಿಲ್ಲ..ಆದ್ರೆ, ಅಲ್ರೌಂಡರ್ ವಿಜಯ್ ಶಂಕರ್ ಬ್ಯಾಟಿಂಗ್ ವೈಫಲ್ಯ ವಿರಾಟ್ ಕೊಹ್ಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ತಂಡದ ಬ್ಯಾಟಿಂಗ್ ಲೈನ್ ಅಪ್ ಮೇಲೆ ಪರಿಣಾಮ ಬೀಳುತ್ತಿದೆ… ಆದ್ರೆ, ಇಲ್ಲಿಯವರೆಗೆ ಟೀಮ್ ಇಂಡಿಯಾ ಗೆದ್ದಿದ್ದು ಮಾತ್ರ ಬೌಲಿಂಗ್ ಬಲದಿಂದಲೇ..
ಶಂಕರ್ ಬದಲು ದಿನೇಶ್ ಕಾರ್ತಿಕ್ಗೆ ಸಿಗುತ್ತಾ ಚಾನ್ಸ್ ?
ವಿಜಯ್ ಶಂಕರ್ ಪ್ರದರ್ಶನ ಲೀಗ್ ಹಂತದಲ್ಲಿ ಹೇಗೋ ನಡೆದೋಗುತ್ತೆ. ಆದ್ರೆ, ನಿರ್ಣಾಯಕ ಸೆಮಿಫೈನಲ್ನಲ್ಲಿ ವಿಜಯ್ ಶಂಕರ್ ಫ್ಲಾಪ್ ಫರ್ಪಾಮೆನ್ಸ್ ಮುಂದುವರಿದ್ರೆ. ಟೀಮ್ ಇಂಡಿಯಾ ಸಂಕಷ್ಟ ಎದುರಿಸುವುದು ಗ್ಯಾರಂಟಿ.. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಸೂಕ್ತ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಿದೆ.
ತಂಡದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಯುವ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮೂಲಕ ಸೆಮಿಫೈನಲ್ ವೇಳೆಗೆ 4ನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರರನ್ನ ಕಣಕ್ಕಿಳಿಸುವ ಜವಾಬ್ದಾರಿ ಟೀಮ್ ಇಂಡಿಯಾ ಮ್ಯಾನೇಜೆಮೆಂಟ್ ಮೇಲಿದೆ. ಅದ್ರೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಾತ್ರ ತಂಡದಲ್ಲಿ ಸಮನ್ವಯತೆ ತರದಂತೆ ಮತ್ತೆ ಮತ್ತೆ ಶಂಕರ್ಗೆ ಅವಕಾಶ ನೀಡುತ್ತಿದ್ದಾರೆ..
ಕಳೆದ ಎರಡು ಪಂದ್ಯಗಳಲ್ಲಿ ಕೊಹ್ಲಿ ಸೈನ್ಯ ಬ್ಯಾಟಿಂಗ್ ವೈಫಲ್ಯ ಹೊರತಾಗಿಯೂ ತಂಡದ ಬೌಲರ್ಸ್ಗಳ ನೆರವಿನಿಂದ ಗೆದ್ದುಕೊಂಡಿದೆ. ಈಗಲಾದೂ ಕ್ಯಾಪ್ಟನ್ ಕೊಹ್ಲಿ ನಾಲ್ಕನೆ ಕ್ರಮಾಂಕದಲ್ಲಿ ಅಳೆದು ತೂಗಿ ಸೂಕ್ತ ಬ್ಯಾಟ್ಸ್ಮನ್ನನ್ನ ಆಯ್ಕೆ ಮಾಡಿಕೊಳ್ಳಬೇಕಿದೆ.