ವಿಶ್ವ ದಾಖಲೆ ಬರೆದ ಕ್ಯಾಪ್ಟನ್ ವಿರಾಟ್ ಕೊಹ್ಲಿ; ವಿರಾಟ್ ಅಬ್ಬರಕ್ಕೆ ಸಚಿನ್, ಲಾರಾ ದಾಖಲೆ ಉಡೀಸ್

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ನಿನ್ನೆ ಮ್ಯಾಂಚೆಸ್ಟರ್ ಅಂಗಳದಲ್ಲಿ ವಿಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ರು. ಮೊನ್ನೆ ಯಷ್ಟೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ನಲ್ಲಿ 11 ಸಾವಿರ ರನ್ ಪೂರೈಸಿದ್ದ ಕ್ಯಾಪ್ಟನ್ ಕೊಹ್ಲಿ ಇದೀಗ ಮತ್ತೊಂದು ದಾಖಲೆಯ ಸರದಾರರಾಗಿದ್ದಾರೆ.

ಓಪನರ್ ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಕಣಕ್ಕಿಳಿದ ಮೂರನೇ ಕ್ರಮಾಂಕದಲ್ಲಿ ಬಂದ ಕ್ಯಾಪ್ಟನ್ ಕೊಹ್ಲಿ ಕನ್ನಡಿಗ ರಾಹುಲ್ ಜೊತೆ ಬೊಂಬಾಟ್ ಬ್ಯಾಟಿಂಗ್ ಮಾಡಿ ತಂಡವನ್ನ ಆರಂಭಿಕ ಕುಸಿತದಿಂದ ಪಾರು ಮಾಡಿದ್ರು.ಜೊತೆಗೆ ಅರ್ಧ ಶತಕ ಬಾರಿಸಿ ಮಿಂಚಿದ್ರು.

ವೇಗದ 20 ಸಾವಿರ ರನ್ ಪೂರೈಸಿದ ಕ್ಯಾಪ್ಟನ್ ಕೊಹ್ಲಿ
ಕೆರಿಬಿಯನ್ನರ ಬೌಲಿಂಗ್ ಅಟ್ಯಾಕ್ನ್ನ ಉಡೀಸ್ ಮಾಡಿದ ವಿರಾಟ್ ಕೊಹ್ಲಿ ಜೆಸನ್ ಹೋಲ್ಡರ್ ಅವರ 25ನೇ ಓವರ್ನ 4ನೇ ಎಸೆತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಫಾರ್ಮೆಟ್ನ್ಲಿ ವೇಗದ 20 ಸಾವಿರ ರನ್ ಪೂರೈಸಿದ ಸಾಧೆನೆ ಮಾಡಿದ್ರು. ಇದರೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ನಂತರ ಈ ಸಾಧನೆ ಮಾಡಿದ ಕೊಹ್ಲಿ ಮೂರನೇ ಬ್ಯಾಟ್ಸ್ಮನ್ ಎನಿಸಿದ್ರು.

ಸಚಿನ್, ಲಾರಾ ದಾಖಲೆ ಪೀಸ್ ಪೀಸ್ ಮಾಡಿದ ಕೊಹ್ಲಿ
ವೇಗದ 20 ಸಾವಿರ ರನ್ ಪೂರೈಸುವ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್ಗಳಾದ ವಿರಾಟ್ ಕೊಹ್ಲಿ ಮತ್ತು ಬ್ರಿಯಾನ್ ಲಾರಾ ಅವರ ದಾಖಲೆಗಳನ್ನ ಧೂಳೀಪಟ ಮಾಡಿದ್ರು. ಸಚಿನ್ ಮತ್ತು ಲಾರಾ 20 ಸಾವಿರ ರನ್ ಪೂರೈಸಲು 453 ಇನ್ನಿಂಗ್ಸ್ಳನ್ನ ತೆಗೆದುಕೊಂಡಿದ್ರು. ಆದರೆ ವಿರಾಟ್ ಈ ಇಬ್ಬರಿಗಿಂತ 36 ಇನ್ನಿಂಗ್ಸ್ಗಳನ್ನ ಕಡಿಮೆ ತೆಗೆದುಕೊಂಡು ಹೊಸ ಇತಿಹಾಸ ಬರೆದಿದ್ದಾರೆ.

ವೇಗದ 20 ಸಾವಿರ ರನ್ ವಿವರ
ಕ್ಯಾಪ್ಟನ್ ಕೊಹ್ಲಿ 20 ಸಾವಿರ ರನ್ ಪೂರೈಸಲು 417 ರನ್ ಇನ್ನಿಂಗ್ಸ್ ತೆಗೆದುಕೊಂಡಿದ್ದ್ದಾರೆ. ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯನ್ ಲಾರಾ 453 ಇನ್ನಿಂಗ್ಸ್ . ಆಸಿಸ್ನ ಮಾಜಿ ನಾಯಕ ರಿಕಿ ಪಾಟಿಂಗ್ 464, ಸೌತ್ ಆಫ್ರಿಕಾ ಮಾಜಿ ನಾಯಕ ಎಬಿಡಿ ವಿಲಿಯರ್ಸ್ 483 ಮತ್ತು ಇದೇ ತಂಡದ ಮಾಜಿ ಆಲ್ರೌಂಡರ್ ಜಾಕ್ ಕಾಲೀಸ್ 491 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವ ಯುದ್ದದ್ದಲ್ಲೂ ದಾಖಲೆಗಳ ದಾಖಲೆಗಳನ್ನ ಬರೆಯುತ್ತಿದ್ದು ಇನ್ನಷ್ಟು ದಾಖಲೆಗಳನ್ನ ಬರೆಯಲಿ ಅನ್ನೋದೇ ನಮ್ಮ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ