ಫ್ರಂಟ್‍ಲೈನ್ ಫಾರ್ಮಸಿಗಳ ಮೇಲೆ ದಾಳಿ ಮುಂದವರಿಸಿದ ಎಸ್‍ಐಟಿ

ಬೆಂಗಳೂರು,ಜೂ.28- ಐಎಂಎ ಕಂಪನಿಗೆ ಸೇರಿದ ಫ್ರಂಟ್‍ಲೈನ್ ಫಾರ್ಮಸಿಗಳ ಮೇಲೆ ಎಸ್‍ಐಟಿ ಇಂದು ಸಹ ದಾಳಿ ಮುಂದುವರೆಸಿದೆ.

ನಿನ್ನೆ ಎರಡು ಸೂಪರ್ ಮಾರ್ಕೆಟ್, ಫಾರ್ಮಸಿ ಗೋದಾಮು ಮೇಲೆ ಎಸ್‍ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ದಿನ ಬಳಕೆ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಫಾರ್ಮಸಿ ಗೋದಾಮುಗಳ ಮೇಲೂ ದಾಳಿ ಮಾಡಿ ಕೋಟ್ಯಂತರ ಮೊತ್ತದ ಔಷಧಿಗಳು, ಸೌಂದರ್ಯ ವರ್ಧಕಗಳನ್ನು ವಶಪಡಿಸಿಕೊಂಡಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ತಂಡ, ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‍ಗೆ ಸೇರಿದ ಆಸ್ತಿಗಳನ್ನು ಪತ್ತೆ ಹಚ್ಚುತ್ತಿದ್ದು, ಇಂದೂ ಸಹ ಫಾರ್ಮಸಿಗಳ ಮೇಲೆ ದಾಳಿ ಮುಂದುವರೆಸಿ ಮಹತ್ವದ ದಾಖಲೆಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ