ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಜಪಾನ್ನ ಒಸಾಕಾದ ಸ್ವಿಸ್ಸೊಟೇಲ್ ನಂಕೈ ಹೋಟೆಲ್ಗೆ ಆಗಮಿಸಿದರು.
ಪ್ರಧಾನಿಯನ್ನು ಹೃತ್ಪೂರ್ವಕವಾಗಿ ಬರ ಮಾಡಿಕೊಂಡ ಅಲ್ಲಿನ ಭಾರತೀಯ ಸಮುದಾಯದ ಸದಸ್ಯರು, ‘ಮೋದಿ ಮೋದಿ’ ಘೋಷಣೆ ಕೂಗಿ ಸಂಭ್ರಮಿಸಿದರು.
ಎರಡನೇ ಅವಧಿಗೆ ಮೋದಿ ಪ್ರಧಾನಿಯಾದ ನಂತರ ಅವರ ಜತೆ ಟ್ರಂಪ್ ನಡೆಸುವ ಮೊದಲ ಸಭೆ ಇದಾಗಿದೆ.
ಜಪಾನ್ನ ಒಸಾಕಾದಲ್ಲಿ ಜೂನ್ 28 ಮತ್ತು 29ರಂದು ಜಿ-20 ಶೃಂಗಸಭೆ ನಡೆಯಲಿದೆ.
ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಟ್ರಂಪ್ ಹಾಗೂ ಮೋದಿ ಭೇಟಿ ಮಹತ್ವ ಪಡೆದಿದೆ. ಭಾರತಕ್ಕೆ ನೀಡಿದ್ದ ಆದ್ಯತಾ ವ್ಯಾಪಾರ ನೀತಿಯ ಸ್ಥಾನಮಾನ ಹಿಂತೆಗೆದುಕೊಂಡ ಹಿನ್ನೆಲೆಯಲ್ಲೂ ಈ ವಿಚಾರ ಸಭೆಯಲ್ಲಿ ಪ್ರಸ್ತಾವವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಮೆರಿಕ-ಚೀನಾ ನಡುವೆ ವ್ಯಾಪಾರ ವಹಿವಾಟು ನಿರ್ಬಂಧ ಸಮರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿನ್ಪಿಂಗ್ ಜತೆಗಿನ ಟ್ರಂಪ್ ಭೇಟಿಯೂ ಗಮನ ಸೆಳೆಯಲಿದೆ.