ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಯುದ್ದ ಹಲವಾರು ರೋಚಕ ಕದನಗಳಿಗೆ ಸಾಕ್ಷಿಯಾಗಿದೆ. ಇಂದು ಮ್ಯಾಂಚೆಸ್ಟರ್ ಅಂಗಳದಲ್ಲಿ ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡಗಳಾದ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಗೆಲುವಿಗಾಗಿ ಫೈಟ್ ನಡೆಸಲಿವೆ. ದಶಕಳ ಹಿಂದೆ ವಿಶ್ವಕಪ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ರಣಾಂಗಣದಲ್ಲಿ ವೀರ ಸೇನಾನಿಗಳಂತೆ ಹೋರಾಡಿವೆ. ಇತ್ತಿಚಿನ ವಷಗಳಲ್ಲಿ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮದಗಜಗಳಂತೆ ಹೋರಾಡಿವೆ. ಈ ಕಾರಣಕ್ಕಾಗಿ ಇಂದು ನಡೆಯುವ ಇಂಡೋ ವಿಂಡೀಸ್ ಫೈಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಉಭಯ ತಂಡಗಳಲ್ಲಿರುವ ಸ್ಟಾರ್ ಆಟಗಾರರ ನಡುವೆ ಬಿಗ್ ವಾರ್ ನಡೆಯಲಿದೆ. ಹಾಗಾದ್ರೆ ಬನ್ನಿ ಯಾರ್ಯಾರ ನಡುವೆ ವಾರ್ ನಡೆಯಲಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.
ರೋಹಿತ್ ಶರ್ಮಾ Vs ಶೆಲ್ಡನ್ ಕಾಟ್ರೆಲ್
ವಿಂಡೀಸ್‌ನ 29ರ ಹರೆಯದ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್, ಪ್ರತಿ ಬಾರಿಯೂ ವಿಕೆಟ್ ಪಡೆದಾಗ ಸೆಲ್ಯೂಟ್ ಸೆಲೆಬ್ರೇಷನ್ ಮೂಲಕ ಟೂರ್ನಿಯಲ್ಲಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ವಿಂಡೀಸ್‌ನ ಪ್ರಮುಖ ಅಸ್ತ್ರವಾಗಿರುವ ಕಾಟ್ರೆಲ್, ಎದುರಾಳಿಗೆ ಕಂಟಕವಾಗಿ ಕಾಡಬಲ್ಲರು. ಆರಂಭದಲ್ಲಿಯೇ ತಂಡಕ್ಕೆ ಯಶಸ್ಸು ತಂದುಕೊಡಬಲ್ಲ ಬೌಲರ್ ಆಗಿದ್ದಾರೆ.ಹೀಗಾಗಿ ವಿಂಡಿಸ್ನ ಶೆಲ್ಡನ್ ಕಾಟ್ರೆಲ್ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಡುವೆ ಫೈಟ್ ನಡೆಯಲಿದೆ. ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಸ್ಟಾರ್ಟ್ ಉತ್ಸಾಹದಲ್ಲಿದ್ರೆ. ಶೆಲ್ಡನ್ ಕಾಟ್ರೆಲ್ ತಂಡಕ್ಕೆ ಬ್ರೇಕ್ ನೀಡೋ ವಿಶ್ವಾಸದಲ್ಲಿದ್ದಾರೆ. ಆದ್ರೆ, ಹಿಟ್ಮ್ಯಾನ್ ರೋಹಿತ್ ಶರ್ಮಾ ಅಬ್ಬರಿಸಿದ್ರೆ, ಕಾಟ್ರೆಲ್ ಬೌಲಿಂಗ್ ದಾಳಿ ಧೂಳಿಪಟ ಆಗೋದು ಗ್ಯಾರಂಟಿ… ಇನ್ನೂ ಈ ಇಬ್ಬರ ನಡುವಿನ ಚೆಂಡು-ದಾಂಡಿನ ನಡುವಿನ ಪೈಪೋಟಿ ಯಾವ ರೀತಿ ಇರುತ್ತೆ ಅನ್ನೋದು ಕಾದು ನೋಡಬೇಕಿದೆ.
ವಿರಾಟ್ ಕೊಹ್ಲಿ Vs ಒಶಾನೆ ಥಾಮಸ್
ವಿರಾಟ್ ಕೊಹ್ಲಿ, ವಿಶ್ವದ ನಂಬರ್ 01 ಬ್ಯಾಟ್ಸ್ಮನ್. ಟೀಮ್ ಇಂಡಿಯಾ ಆಧಾರಸ್ಥಂಭ.. ಯಾವುದೇ ಬೌಲರ್ನ ಎಸೆತಗಳನ್ನ ಲೀಲಾಜಾಲವಾಗಿ ಬೌಂಡರಿಗೆ ಅಟ್ಟುವಲ್ಲಿ ವಿರಾಟ್ ಎತ್ತಿದ ಕೈ.. ಸದ್ಯ ಉತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಗೆ ವಿಂಡೀಸ್ ಸ್ಪೀಡ್ ಸ್ಟಾರ್ ಒಶಾನೆ ಥಾಮಸ್ ಬ್ರೇಕ್ ಹಾಕುವ ಕನಸಿನಲ್ಲಿದ್ದಾರೆ.. ವಿಂಡಿಸ್ನ ಪ್ರಮುಖ ಬೌಲರ್ ಆಗಿರುವ ಥಾಮಸ್ ಟೀಮ್ ಇಂಡಿಯಾದ ಅಗ್ರಕ್ರಮಾಂಕಕ್ಕೆ ಶಾಕ್ ನೀಡುವ ಉತ್ಸಾಹದಲ್ಲಿದ್ದಾರೆ. ಆದ್ರೆ ಥಾಮಸ್ ಬೌಲಿಂಗ್ ದಾಳಿಯನ್ನ ಛಿದ್ರಗೊಳಿಸಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೊಂಕಕಟ್ಟಿ ನಿಂತಿದ್ದಾರೆ..
ಹಾರ್ದಿಕ್ ಪಾಂಡ್ಯಾ Vs ಜೆಸನ್ ಹೋಲ್ಡರ್
ಟೀಮ್ ಇಂಡಿಯಾದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವಿಂಡಿಸ್ ನಾಯಕ ಜೆಸನ್ ಹೋಲ್ಡರ್ ನಡುವಿನ ಕಾಳಗ ತೀವ್ರ ಕುತೂಹಲ ಮೂಡಿಸಿದೆ. ಬ್ಯಾಟಿಂಗ್ ಅಲ್ಲದೆ ಬೌಲಿಂಗ್ನಲ್ಲಿ ಗಮನ ಸೆಳೆಯುತ್ತಿರುವ ಪಾಂಡ್ಯಾ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್. ಸ್ಲಾಗ್ ಓವರ್ಗಳಲ್ಲಿ ಅಬ್ಬರಿಸುವ ಪಾಂಡ್ಯ ತಂಡದ ದಿಕ್ಕನ್ನೇ ಬದಲಿಸಬಲ್ಲರು.. ಹೀಗಾಗಿ ಹಾರ್ದಿಕ್ ಪಾಂಡ್ಯ ಸಿಡಿದೆದ್ರೆ, ಕೆರಿಬಿಯನ್ ದೈತ್ಯರು ಉಡೀಸ್ ಆಗೋದು ಪಕ್ಕ.. ಪಾಂಡ್ಯಾಗೆ ಸರಿಸಾಟಿಯಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಮಾಲ್ ಮಾಡಬಲ್ಲ ಆಟಗಾರ ಅಂದ್ರೆ ಅದು ವಿಂಡಿಸ್ ನಾಯಕ ಜೆಸನ್ ಹೋಲ್ಡರ್, ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರ್ ಕೈ ಮೇಲಾಗುತ್ತೆ ಅನ್ನೋ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿದೆ.
ಕ್ರಿಸ್ ಗೇಲ್ Vs ಜಸ್ಪ್ರೀತ್ ಬೂಮ್ರಾ
ವಿಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಹಾಗೂ ಟೀಮ್ ಇಂಡಿಯಾ ಕನ್ಸಿಸ್ಟೆಂಟ್ ಬೌಲರ್ ಜಸ್ಪ್ರೀತ್ ಬೂಮ್ರಾ ನಡುವೆ ಬಿಗ್ ಫೈಟ್ ನಡೆಯಲಿದೆ. ವಿಂಡಿಸ್ನ ಡೇಂಜರಸ್ ಬ್ಯಾಟ್ಸ್ಮನ್ ಕ್ರಿಸ್ ಗೇಲ್, ಆರಂಭದಿಂದಲೇ ಎದುರಾಳಿ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸುವ ಕ್ರಿಸ್ ಗೇಲ್ ಕ್ರೀಸ್ನಲ್ಲಿನಲ್ಲಿ ಇದ್ದಷ್ಟು ಎದುರಾಳಿ ತಂಡಕ್ಕೆ ಅಪಾಯ ಗ್ಯಾರಂಟಿ. ಹೀಗಾಗಿ ಕ್ರಿಸ್ ಗೇಲ್ನ ಆರ್ಭಟಕ್ಕೆ ಬ್ರೇಕ್ ಹಾಕೋಕೆ ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಬೂಮ್ರಾ ಸಜ್ಜಾಗಿದ್ದಾರೆ. ಈ ಮೂಲಕ ವಿಂಡೀಸ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡೋಕೆ ಸಜ್ಜಾಗಿದ್ದಾರೆ..
ಶಿಮ್ರಾನ್ ಹೇಟ್ಮಾರ್ Vs ಕುಲ್ಚಾ ಗ್ಯಾಂಗ್
ವಿಂಡೀಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯೇ ಶಿಮ್ರಾನ್ ಹೇಟ್ಮಾರ್, ವಿಂಡೀಸ್ ಪಾಳೆಯದ ಮತ್ತೊಬ್ಬ ಡೇಜಂರಸ್ ಬ್ಯಾಟ್ಸ್ಮನ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.. ಈ ಆಟಗಾರನಿಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಕಳುಹಿಸದಿದ್ರೆ, ಟೀಮ್ ಇಂಡಿಯಾಕ್ಕೆ ಕಂಟಕವಾಗಬಲ್ಲರು. ನಿರಾಯಾಸವಾಗಿ ರನ್ ಕಲೆಹಾಕುವ ಶಿಮ್ರಾನ್ಗೆ ಟೀಮ್ ಇಂಡಿಯಾದ ಕುಲ್ಚಾ ಗ್ಯಾಂಗ್ ಯೋಜನೆ ರೂಪಿಸಿದೆ. ಮಿಡಲ್ ಓವರ್ನಲ್ಲಿ ಅಟ್ಯಾಕ್ಗಿಳಿಯುವ ಕುಲ್ದೀಪ್ ಯಾದವ್, ಚಾಹಲ್ ಎದುರಾಳಿ ತಂಡದ ಸ್ಕೋರ್ಗೆ ಕಡಿವಾಣ ಹಾಕಿ ಹೆಡೆಮುರಿ ಕಟ್ತಾರೆ. ಇನ್ನೂ ಈ ಜೋಡಿ ಮ್ಯಾಜಿಕ್ ಮಾಡಿದ್ರೆ.. ವಿಂಡೀಸ್‌ನ ಮಧ್ಯಮ ಕ್ರಮಾಂಕ ಪಲ್ಟಿಹೊಡೆಯೋದ್ರಲ್ಲಿ ಅನುಮಾನವೇ ಇಲ್ಲ.. ಆದ್ರೆ, ಕುಲ್ಚಾ ಜೋಡಿಯ ಮೋಡಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಜಸ್ಟ್ ವೇಯ್ಟ್ ಅಂಡ್ ಸಿ…ಒಟ್ಟಾರೆ ಇಂದು ನಡೆಯುವ ಇಂಡೋ ವಿಂಡೀಸ್ ವಾರ್ನಲ್ಲಿ ಯಾರು ಯಾರ ಮೇಲೆ ಸವಾರಿ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.