ಫರೀದಾಬಾದ್, ಜೂ.27- ಕಾಂಗ್ರೆಸ್ ಯುವ ನಾಯಕ ವಿಕಾಸ್ ಚೌಧರಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ಹರಿಯಾಣದ ಫರೀದಾಬಾದ್ನಲ್ಲಿ ನಡೆದಿದೆ.
ಹರಿಯಾಣ ಘಟಕದ ಕಾಂಗ್ರೆಸ್ ವಕ್ತಾರರೂ ಆಗಿರುವ ವಿಕಾಸ್ ಇಂದು ಬೆಳಗ್ಗೆ ಎಂದಿನಂತೆ ಜಿಮ್ಗೆ ತೆರಳಿ ತಮ್ಮ ಕಾರನ್ನು ಪಾರ್ಕಿಂಗ್ ಮಾಡುತ್ತಿದ್ದಾಗ ಎರಡೂ ಕಡೆಗಳಿಂದ ಆಕ್ರಮಣ ಮಾಡಿದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಸುಮಾರು 10 ಗುಂಡುಗಳು ವಿಕಾಸ್ ದೇಹ ಹೊಕ್ಕಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರೆದಿದೆ.