ಯುವಪೀಳಿಗೆ ರಕ್ತದಾನ ಮಾಡುವ ಗುಣವನ್ನು ರೂಡಿಸಿಕೊಳ್ಳಬೇಕು-ಡಾ.ರಾಜು ಚಂದ್ರಶೇಖರ್

ಬೆಂಗಳೂರು, ಜೂ.26-21ನೇ ಶತಮಾನದಲ್ಲಿ ಎಲ್ಲವೂ ನಮ್ಮ ಅಂಗೈಯಲ್ಲೇ ದೊರೆಯುತ್ತಿದ್ದು, ಆದರೆ ರಕ್ತವನ್ನು ಪ್ರಯೋಗಾಲಯಗಳಲ್ಲಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯುವಪೀಳಿಗೆ ರಕ್ತದಾನ ಮಾಡುವ ಮಾನವೀಯತೆ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಡಾ.ರಾಜು ಚಂದ್ರೆಶೇಖರ್ ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಗಾಂಧಿಭವನದಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಭಿತ್ತಿಚಿತ್ರ ರಚನಾ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನಮಗೆ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಪದಾರ್ಥಗಳು ಸಿಗುತ್ತವೆ ಆದರೆ ಜೀವ ಉಳಿಸುವ ರಕ್ತ ಮಾತ್ರ ದೊರೆಯುತ್ತಿಲ್ಲ. ಯುವಪೀಳಿಗೆಯಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿವೆ ಇದರಿಂದ ಕೆಲವೊಮ್ಮೆ ರಕ್ತದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಇದುವರೆಗೂ ಕ್ರೂಢಿಕರಿಸಿರುವ ರಕ್ತದಲ್ಲಿ ಶೇ.80ರಷ್ಟು ರಕ್ತ ಯುವಕರಿಂದ ಸಂಗ್ರಹವಾಗಿದ್ದು, 2017-18 ಸಾಲಿನಲ್ಲಿ ಒಂದು ಕೋಟಿಗೂ ಅಧಿಕ ರಕ್ತ ಯೂನಿಟï ಗಳು ಸಂಗ್ರಹವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.. ಈ ಕೆಲಸವನ್ನು ಕೆಲವು ಎನ್‍ಎಸ್‍ಎಸ್ ಸೇವೆ ಘಟಕಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಅಭಿನಂದಿಸಿದರು..

ಗಾಂಧೀಜಿ ಜನ್ಮಾದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಮಾಡುತ್ತಿರುವುದು ಅರ್ಥ ಪೂರ್ಣವಾಗಿದೆ.. ಇದರಿಂದ ಗಾಂಧೀಜಿಯವರಿಗೆ ನಿಜವಾದ ಗೌರವ ಸಿಕ್ಕಿದೆ ಎಂದು ಅಭಿನಂದಿಸಿದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜೊತೆ ರಕ್ತದಾನ ಶಿಬಿರಗಳಲ್ಲಿ ಎಲ್ಲಾ ಕಾಲೇಜುಗಳು ಭಾಗವಹಿಸುವಂತೆ ಕಾಲೇಜುಗಳಿಗೆ ಪತ್ರ ಬರೆಯುವ ಚಿಂತನೆ ಹೊಂದಿದ್ದೇವೆ ಎಂದು ತಿಳಿಸಿದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಡಾ.ಎಚ್.ಎಸ್.ನರೇಂದ್ರ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ