ವಿಶ್ವ ಯುದ್ದದಲ್ಲಿ ಗೆಲುವಿನ ಓಟ ಮುಂದುವರೆಸಿರುವ ಟೀಮ್ ಇಂಡಿಯಾ ಮೊನ್ನೆ ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧ ಹಲವಾರು ತಪ್ಪುಗಳನ್ನ ಮಾಡಿ ತಿಣುಕಾಡಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಅತಿ ಹೆಚ್ಚು ಚರ್ಚೆಯ ವಿಷಯವಾಗಿದ್ದು ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ.
ವಿಶ್ವ ಮಹಾಸಮರದ ಮೊದಲ ಮೂರು ಪಂದ್ಯಗಳಲ್ಲಿ ತಂಡದ ಬ್ಯಾಟ್ಸ್ಮನ್ಗಳು ಜಭರ್ದಸ್ತ್ ಬ್ಯಾಟಿಂಗ್ ಮಾಡಿದ್ರು. ಆದರೆ ನಿಜವಾದ ಅಸಲಿ ಮುಖವಾಡ ಗೊತ್ತಾಗಿದ್ದು ಅಫ್ಗಾನ್ ಎದುರು. ಆ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಬಿಟ್ಟರೆ ತಂಡದ ಯಾವ ಬ್ಯಾಟ್ಸ್ಮನ್ಗಳು ಹೇಳಿಕೊಳ್ಳುವಂತಹ ಪರ್ಫಾಮನ್ಸ್ ಕೊಡಲಿಲ್ಲ. ಅದರಲ್ಲೂ ತಂಡದ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ ಅಪ್ನ ತಾಕತ್ತೇನು ಎಂಬುದು ಮೊತ್ತಮ್ಮೆ ಜಗಜಾಹೀರಾಯ್ತು.
ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕ್ಯಾಪ್ಟನ್ ಕೊಹ್ಲಿ ಇಷ್ಟು ದಿನ ಅಬ್ಬರಿಸುತ್ತಿದ್ದರಿಂದ ತಂಡದ ಮಿಡ್ಲ್ ಆರ್ಡರ್ನ ತಾಕತ್ತು ಏನೆಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಮೊನ್ನೆ ಓಪನರ್ ಧವನ್ ಯಾವಾಗ ಇಂಜುರಿಯಿಂದಾಗಿ ಟೂರ್ನಿಯಿಂದಲೇ ಹೊರ ನಡೆದ್ರೋ ಆಗಲೇ ತಂಡ ಒತ್ತಡದಲ್ಲಿ ಸಿಲುಕುವಂತಾಯಿತು.
ಟೀಂ ಇಂಡಿಯಾವನ್ನ ಮತ್ತೆ ಕಾಡಿದ ನಾಲ್ಕರ ಕಗ್ಗಂಟು
ಟೀಂ ಇಂಡಿಯಾವನ್ನ ಕಾಡಿದ ಅತಿ ದೊಡ್ಡ ಸಮಸ್ಯೆ ಅಂದ್ರೆ ಅದು ತಂಡದ ನಾಲ್ಕನೆ ಕ್ರಮಾಂಕ. ಬರೋಬ್ಬರಿ ಮೂರು ವರ್ಷಗಳಿಂದ ತಂಡವನ್ನ ಪೆಡಂಭೂತದಂತೆ ಕಾಡ್ತಿದ್ದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೂ ತಲೆ ನೋವಾಗಿದೆ. ಈ ಸಮಸ್ಯೆಯನ್ನ ಬಗೆಹರಿಸಲು ಟೀಂ ಇಂಡಿಯಾ ಮ್ಯಾನೇಜ್ ಎಕ್ಸ್ಪೆರಿಮೆಂಟ್ ಮಾಡಿದ್ದೆ ಮಾಡಿದ್ದು. ಎರಡು ವರ್ಷಗಳ ಹಿಂದೆ ನಡೆದ ಚಾಂಪಿಯನ್ಸ್ ಟ್ರೋಫಿ ನಂತರ ಈ ಸ್ಲಾಟ್ನಲ್ಲಿ ಬರೋಬ್ಬರಿ 11 ಬ್ಯಾಟ್ಸ್ಮನ್ಗಳು ಆಡಿದ್ದಾರೆ. ಆದರೆ ಈ ಯಾವ ಬ್ಯಾಟ್ಸ್ಮನ್ಗಳು ಗಟ್ಟಿಯಾಗಿ ನಿಲ್ಲಲಿಲ್ಲ ಇದು ಎಲ್ಲಿಯವರೆಗೆ ಅಂದ್ರೆ ವಿಶ್ವಕಪ್ ಸಮೀಪಿಸಿದ್ರು ಈ ಸಮಸ್ಯೆ ಬಗೆಹರಿದಿರಲಿಲ್ಲ. ಇದರ ಬಗ್ಗೆ ಸ್ವತಃ ಕೋಚ್ ಶಾಸ್ತ್ರಿ ಬಳಿಯೂ ಉತ್ತರವಿರಲಿಲ್ಲ.
ನಾಲ್ಕನೆ ಸ್ಲಾಟ್ನಲ್ಲಿ ಇಂಪ್ರೆಸ್ ಮಾಡಿಲ್ಲ ಆಲ್ರೌಂಡರ್ ವಿಜಯ್ ಶಂಕರ್ ಸದ್ಯ ವಿಶ್ವಕಪ್ನಲ್ಲಿ ನಾಲ್ಕನೆ ಸ್ಲಾಟ್ನಲ್ಲಿ ಆಡುತ್ತಿರುವ ಆಲ್ರೌಂಡರ್ ವಿಜಯ್ ಶಂಕರ್ ಇಂಪ್ರೆಸ್ ಮಾಡಿಲ್ಲ. ನಂ.4ಗೆ ವಿಜಯ್ ಶಂಕರ್ ಹೇಳಿಮಾಡಿಸಿದ ಬ್ಯಾಟ್ಸ್ಮನ್ ಆದ್ರೆ ಅವರ ಸಾಮರ್ಥ್ಯ ಸಾಕಾಗುತ್ತಿಲ್ಲ. ಇನ್ನು ಮಿಸ್ಟರ್ ಕೂಲ್ ಧೋನಿ ಅಫ್ಗಾನ್ ವಿರುದ್ಧ 52 ಎಸೆತ ಎದುರಿಸಿ 28 ರನ್ ಕಲೆ ಹಾಕಿದ್ದರಿಂದ ಟೀಂ ಇಂಡಿಯಾ ಕೊನೆಯಲ್ಲಿ 20 ರಿಂದ 30 ರನ್ಗಳ ಕೊರತೆ ಅನುಭವಿಸಿತು.
ಮರಿ ಧೋನಿ ರಿಷಬ್ಗೆ ಸಿಗಬೇಕು ಚಾನ್ಸ್
ಟೀಂ ಇಂಡಿಯಾದ ಬ್ಯಾಟಿಂಗ್ ಸಮಸ್ಯೆ ಬಗೆಹರಿಸಬೇಕಿದ್ದಲ್ಲಿ ಮರಿ ಧೋನಿ ರಿಷಭ್ಗೆ ಅವಕಾಶ ಕೊಡಬೇಕು. ಮಿಡ್ಲ್ ಆರ್ಡರ್ನಲ್ಲಿ ಹಾರ್ದಿಕ್ ಪಾಂಡ್ಯ Right Hand Batsman ಆಗಿರೋದ್ರಿಂದ ಎದುರಾಳಿ ಬೌಲರ್ಸ್ಗಳನ್ನ Confuse ಮಾಡಲು left Hand batsman ಬೇಕಾಗಿದ್ದಾರೆ. ರಿಷಭ್ ಪಂತ್ ಮಿಡ್ಲ್ ಆರ್ಡರ್ ತಂಡದ ಅವಶ್ಯಕತೆಗೆ ತಕ್ಕಂತೆ ಬ್ಯಾಟಿಂಗ್ ಮಾಡುವ ತಾಕತ್ತು ಹೊಂದಿದ್ದಾರೆ. ಸದ್ಯ ಧವನ್ ನಂತರ ಎಡಗೈ ಬ್ಯಾಟ್ಸ್ಮನ್ಗಳಿಲ್ಲ. ಹೀಗಾಗಿ ರಿಷಭ್ ಗೆ ಅವಕಾಶ ಕೊಟ್ಟರೆ ತಂಡದ ಬ್ಯಾಟಿಂಗ್ ಲೈನ್ಅಪ್ ಮತ್ತಷ್ಟು ಬಲಿಷ್ಠವಾಗಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಲೈನ್ಅಪ್ ಓಪನರ್ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನ ನೆಚ್ಚಿಕೊಂಡಿದೆ. ಆಗಿರುವ ತಪ್ಪಿನಿಂದ ಎಚ್ಚೆತ್ತುಕೊಂಡು ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳನ್ನ ನೆಚ್ಚಿಕೊಳ್ಳದೇ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ ತಮ್ಮ ತಮ್ಮ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿದೆ. ಅಫ್ಘಾನಿಸ್ತಾನ ವಿರುದ್ಧ ಸೋಲನ್ನ ತಪ್ಪಿಸಿಕೊಂಡಿರುವ ಟೀಂ ಇಂಡಿಯಾ ಮುಂದಿನ ಪಂದ್ಯಗಳಲ್ಲಿ ತಂಡದ ಬ್ಯಾಟ್ಸ್ಮನ್ಗಳು ಅಬ್ಬರದ ಬ್ಯಾಟಿಂಗ್ ಮಾಡಬೇಕಿದೆ.