ಡಾಕಾ,ಜೂ.24-ಬಾಂಗ್ಲ ದೇಶದ ರಾಜಧಾನಿ ಡಾಕಾ ಹತ್ತಿರ ಸೇತುವೆ ಮೇಲೆ ರೈಲು ಚಲಿಸುತ್ತಿದ್ದ ವೇಳೆ ಸೇತುವೆ ಕುಸಿತಗೊಂಡಿತು. ಇದರ ಪರಿಣಾಮ, ರೈಲಿನ ಐದು ಬೋಗಿಗಳು ನೆಲಕ್ಕೆ ಅಪ್ಪಳಿಸಿದವು ಅವುಗಳಲ್ಲಿ ಒಂದು ಬೋಗಿ ನಾಲುವೆಯ ನೀರಿನಲ್ಲಿ ಮುಳುಗಿತು.
ಅಪಘಾತದ ನಂತರ ಡಾಕಾದಿಂದ ಈಶಾನ್ಯ ಪ್ರದೇಶಗಳಿಗೆ ರೈಲು ಸೇವೆಯನ್ನು ನಿಲ್ಲಿಸಲಾಯಿತು.
ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಎಕ್ಸ್‍ಪ್ರೆಸ್ ರೈಲು ಹೋಗುತ್ತಿದ್ದಂತೆ ಸೇತುವೆ ಒಂದು ಭಾಗ ಕುಸಿದ ಪರಿಣಾಮ, ಐದು ಬೋಗಿಗಳು ಹಳಿ ತಪ್ಪಿ ನೆಲಕ್ಕೆ ಅಪ್ಪಳಿಸಿದವು. ಅವುಗಳಲ್ಲಿ ಒಂದು ಬೋಗಿ ನಾಲೆಯ ನೀರಿನಲ್ಲಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾಕಾದಿಂದ 300 ಕಿ.ಮೀ ದೂರದಲ್ಲಿರುವ ಕಲೌರಾದಲ್ಲಿ ನಡೆದ ಈ ಅಪಘಾತದಲ್ಲಿ ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ.
ಸತ್ತವರನ್ನು ಮತ್ತು ಗಾಯಗೊಂಡವರನ್ನು ಅವಶೇಷಗಳಡಿಯಿಂದ ಹೊರತೆಗೆಯುವುದರಲ್ಲಿ ಸ್ಥಳೀಯ ಜನರು, ಅಗ್ನಿ ಶಾಮಕ ದಳದವರು ಮತ್ತು ಪೊಲೀಸ್ ತಂಡಗಳು ನಿರತವಾಗಿವೆ ಎಂದು ಪೊಲೀಸ್ ಅಧೀಕ್ಷಕ ರಶೀದುಲ್ ಹಸನ್ ಹೇಳಿದರು.
ಗಾಯಗೊಂಡಿರುವರ ಪೈಕಿ ಗಂಭೀರ ಸ್ಥಿತಿಯಲ್ಲಿರುವ 21 ಜನರನ್ನು ಚಿಕಿತ್ಸೆಗಾಗಿ ಹತ್ತಿರದ ಸಿಲ್ಹೆಟ್ ನಗರದ ಆಸ್ಪತ್ರೆಗೆ ಕೆರೆದೊಯ್ಯಲಾಯಿತು