ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪ

ಜಕಾರ್ತ, ಜೂ.24- ಪೂರ್ವ ಇಂಡೋನೆಷ್ಯಾದಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪದಿಂದ ಅದೃಷ್ಟವಶಾತ್ ಭಾರೀ ಹಾನಿ ಅಥವಾ ಸಾವು-ನೋವಿನ ವರದಿಯಾಗಿಲ್ಲ.

ಭೂಕಂಪದಿಂದಾಗಿ ಸಾಗರ ತೀರ ಪ್ರದೇಶಗಳಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ.

ಸ್ಥಳೀಯ ಕಾಲಮಾನ 11.53ರಲ್ಲಿ ಬಂಡಾ ಸಮುದ್ರದ ಅಂಬೊನ್ ದ್ವೀಪದಿಂದ ದಕ್ಷಿಣಕ್ಕೆ 208 ಕಿ.ಮೀ. ಆಳ ಸಮುದ್ರದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿದೆ.

ಸಮುದ್ರದ ಭಾರೀ ಆಳದಲ್ಲಿ ಭೂಕಂಪ ಸಂಭಸಿರುವುದರಿಂದ ಸುನಾಮಿ ಅಪ್ಪಳಿಸುವ ಆತಂಕಲ್ಲ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕ ಕೇಂದ್ರ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ