ನೈಜೀರಿಯಾ,ಜೂ.24-ನೈಜೀರಿಯಾ ದೇಶದ ಆಗ್ನೇಯ ಪ್ರದೇಶದಲ್ಲಿ ತೈಲದ ಪೈಪ್‍ಲೈನ್ ಸ್ಪೋಟಗೊಂಡ ಹಿನ್ನಲೆ, ಕನಿಷ್ಟ 8 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಹೇಳಿದರು.
ತೈಲ ಕೇಂದ್ರವಾದ ಪೋರ್ಟ್ ಹಾಕೋರ್ಟ್ ಬಳಿಯ ಒಯಿಗ್ಬೊದಲ್ಲಿ ಪೈಪ್‍ಲೈನ್ ನಿರ್ವಹಣಾ ಕಾರ್ಯದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ರಾಜ್ಯ ಪೊಲೀಸ್ ವಕ್ತಾರ ನಾಮ್ಡಿ ಒಮೋನಿ ತಿಳಿಸಿದ್ದಾರೆ.
ಸ್ಪೋಟ ಸಂಭವಿಸಿದಾಗ ಈ ಪ್ರದೇಶದ ಕೆಲವು ಜನರು ಚೆಲ್ಲಿದ ಉತ್ಪನ್ನವನ್ನು ತೆಗೆಯಲು ಹೋಗಿದ್ದರು ಎಂದು ಅವರು ಹೇಳಿದರು. ನೈಜೀರಿಯಾ ಆಪ್ರಿಕಾದ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿದ್ದು, ಇದು ಸರ್ಕಾರದ ಅದಾಯದ ಮೂರನೇ ಎರಡರಷ್ಟು ಮತ್ತು ರಪ್ತು ಗಳಿಕೆಯ ಬಹು ಪಾಲನ್ನು ಹೊಂದಿದೆ.