
ಉಡುಪಿ, ಜೂ.24-ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಬೈಕ್ಗಳು ಸುಟ್ಟು ಹೋಗಿರುವ ಘಟನೆ ಮಣಿಪಾಲ ರಸ್ತೆಯಲ್ಲಿ ನಡೆದಿದೆ.
ಇಂದ್ರಾಣಿ ರೈಲ್ವೆ ಸೇತುವೆ ಬಳಿ ಮೂರು ಮಹಡಿಗಳ ಕಟ್ಟಡಕ್ಕೆ ನಿನ್ನೆ ರಾತ್ರಿ ಬೆಂಕಿ ತಗುಲಿದೆ. ದ್ವಿಚಕ್ರ ವಾಹನಗಳ ಶೋರೂಂ ಹೊಂದಿರುವ ಈ ಕಟ್ಟಡದಲ್ಲಿ ನೂರಾರು ವಾಹನಗಳಿದ್ದವು. ನಿನ್ನೆ ಭಾನುವಾರವಾಗಿದ್ದರಿಂದ ರಜೆ ಇದ್ದು, ಸಿಬ್ಬಂದಿ ಯಾರೂ ಇರಲಿಲ್ಲ.
ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಟ್ಟಡ ಹೊತ್ತಿ ಉರಿದಿದೆ. ಕೂಡಲೇ ಎರಡು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ.
ಕಟ್ಟಡದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾರ್ಟ್ಸಕ್ರ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿ ನಿಶಾಜೇಮ್ಸ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿಶಾಮಕದಳದ ಸಿಬ್ಬಂದಿ ನಷ್ಟ ಅಂದಾಜು ಮಾಡುತ್ತಿದ್ದಾರೆ.