ಬೆಂಗಳೂರು, ಜೂ.23- ರಾಜ್ಯದ ಮೂವರು ರೂಪದರ್ಶಿಯರು ಇತ್ತೀಚೆಗೆ ಮುಂಬೈನ ಎಸ್ಕೆ ರೇಸಾರ್ಟ್‍ನಲ್ಲಿ ನಡೆದ ಮಿಸೆಸ್ ಇಂಡಿಯಾ -ಐ ಆಮ್ ಪವರ್‍ಫುಲ್-2019 ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್ ಗ್ಲೋಬಲ್ ಯುನಿವರ್ಸ್, ಮಿಸೆಸ್ ವಲ್ರ್ಡ್‍ವೈಡ್, ಮಿಸೆಸ್ ಕರ್ವಿ ವಲ್ರ್ಡ್‍ವೈಡ್‍ಗೆ ಆಯ್ಕೆಯಾಗಿದ್ದಾರೆ.
ಮುಂಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿದ ಭಾಗಗಳಿಂದ 21 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಮಿಸೆಸ್ ಇಂಡಿಯಾ ವಲ್ರ್ಡ್‍ವೈಡ್ ಆಗಿ ಗೀತಾಂಜಲಿ ರಘು, ಮಿಸೆಸ್ ಇಂಡಿಯಾ ಏಷ್ಯಾ ಪೆಸಿಫಿಕ್ ಆಗಿ ಗಾಯತ್ರಿ ಮೊಹಂತಿ ಮತ್ತು ಮಿಸೆಸ್ ಇಂಡಿಯಾ ಯುನಿವರ್ಸ್ ಕರ್ವಿ ಆಗಿ ಮಧುರಾ ಆಚಾರ ಅವರು ರಾಷ್ಟ್ರ ಮಟ್ಟದ ಕೀರಿಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮಿಸೆಸ್ ಗ್ಲೋಬಲ್ ಯುನಿವರ್ಸ್, ಮಿಸೆಸ್ ವಲ್ರ್ಡ್‍ವೈಡ್ ಮತ್ತು ಮಿಸೆಸ್ ಕರ್ವಿ ಯುನಿವರ್ಸ್ ಕಿರೀಟಕ್ಕೆ ಕೊನೆ ಹಂತದ ಸ್ಪರ್ಧೆ ನವೆಂಬರ್‍ನಲ್ಲಿ ಸಿಂಗಾಪುರ ಮತ್ತು ಬಾಲಿಯಲ್ಲಿ ನಡೆಯುಲಿದೆ.
ಜಗತ್ತಿನ ವಿವಿಧ ದೇಶಗಳಿಂದ ಆಯ್ಕೆಯಾದ ರೂಪದರ್ಶಿಯರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಸ್ಪರ್ಧೆಯಲ್ಲಿ ಗೀತಾಂಜಲಿ ರಘು, ಗಾಯತ್ರಿ ಮೊಹಂತಿ ಮತ್ತು ಮಧುರಾ ಆಚಾರ ಭಾರತವನ್ನು ಪ್ರತಿನಿಧಿಸಲಿದ್ದಾರೆ.