ರಾಷ್ಟ್ರೀಯ ಫಾರ್ಮಥಾನ್-ಯುವ ಜತೆಯೊಂದಗೆ ಬೆರೆತ ನೂರಾರು ರೈತರು

ಬೆಂಗಳೂರು, ಜೂ.23- ಫಾರ್ಮಥಾನ್‍ನಲ್ಲಿ ನೂರಾರು ರೈತರಿಗೆ ನಗರದ ಯುವ ಜನತೆಯೊಂದಿಗೆ ಬೆರೆಯಲು ಅವಕಾಶ ದೊರೆಯಿತು.

ನಗರದಲ್ಲಿರುವ ಅನೇಕರಿಗೆ ಕೃಷಿಯ ವಿಧಾನಗಳು ಹಾಗೂ ರೈತ ಸಮುದಾಯ ಎದುರಿಸುವ ಸವಾಲುಗಳು ಹಾಗೂ ಕಷ್ಟಗಳನ್ನು ಅರಿಯುವ ಅವಕಾಶ ದೊರೆಯುವುದಿಲ್ಲ.

ರಾಷ್ಟ್ರೀಯ ಫಾರ್ಮಥಾನ್, ನಗರದ ಐಟಿ ಉದ್ಯಮಿಗಳಿಗೆ ಇಂತಹ ರೈತರ ದಣಿವರಿಯದ ಪ್ರಯತ್ನ ಹಾಗೂ ಶ್ರಮದ ಕುರಿತು ಅರಿಯಲು ಅವಕಾಶ ಕಲ್ಪಿಸಿತ್ತು.

ಎಲೆಕ್ಟ್ರಾನಿಕ್ ಸಿಟಿಯಲ್ಲಿ , ಅದೊಂದು ಸಂಸ್ಕøತಿಗಳ ಮಿಶ್ರಣವಾಗಿತ್ತು. ಇದರಲ್ಲಿ ಪಾಲ್ಗೊಂಡ ಅನೇಕರು ಸಹಜ ಹಾಗೂ ಸಮಗ್ರ ಕೃಷಿಯ ವಿಧಾನಗಳನ್ನು ಅರಿತರು.

ಎರಡು ದಿನಗಳ ಕಾರ್ಯಕ್ರಮ ಸುಸ್ಥಿರ ಕೃಷಿ, ಸಮುದಾಯ ಕೃಷಿ ಹಾಗೂ ಕೃಷಿಯ ಹಂಚಿಕೆಯ ಸಂಪನ್ಮೂಲಗಳ ಮೇಲೆ ವಿಶೇಷ ಬೆಳಕು ಚೆಲ್ಲಿತು. ಇದು ಸಹಜ ಕೃಷಿಯಲ್ಲಿ ತೊಡಗಿರುವರು ಹಾಗೂ ಅದನ್ನು ಬೆಂಬಲಿಸುವರನ್ನು ಒಟ್ಟಿಗೆ ತರುವ ಮೊಟ್ಟ ಮೊದಲ ಪ್ರಯತ್ನವಾಗಿತ್ತು.

ಈ ರಾಷ್ಟ್ರೀಯ ಫಾರ್ಮಥಾನ್, ಎಸ್ತಾ ಸೊಸೈಟಿ ಸ್ವಯಂ ಸೇವಾ ಸಂಘಟನೆಯ ಸಂಸ್ಥಾಪಕ ಅತ್ಚುತ ಅವರ ಕನಸಿನ ಕೂಸಾಗಿದ್ದು, ಭಾರತೀಯ ಕೃಷಿಗರ ಜೀವನ ಸುಧಾರಣೆಗಾಗಿ ಭಾರತಾದ್ಯಂತಹ ಉತ್ರಮ ಮನಸ್ಸುಗಳನ್ನು ಒಂದಾಗಿಸುವ ಗುರಿ ಹೊಂದಿದೆ.

ತಮ್ಮ ಅನುಭವ ಹಂಚಿಕೊಂಡ ಐಟಿ ಉದ್ಯಮಿ ರಾಘವೇಂದ್ರ, ನಮ್ಮಲ್ಲಿ ಅನೇಕರು ಕೇವಲ ಗ್ರಾಹಕರಾಗಿದ್ದು, ರೈತರು ಎದುರಿಸುವ ನೋವು, ಸವಾಲುಗಳು, ವಿಶೇಷವಾಗಿ ಪರಿಸರದ ವಿವಿಧ್ಯತೆಗಳ ಕುರಿತು ತಿಳಿದಿಲ್ಲ. ರೈತರು ಭಾರತವನ್ನು ಆರ್ಥಿಕವಾಗಿ ಸ್ವತಂತ್ರ ಹಾಗೂ ಸ್ವವಲಂಬಿತವನ್ನಾಗಿಸಲು ಹೆಚ್ಚಿನ ಶ್ರಮಪಡುತ್ತಾರೆ. ಇಂದು ರೈತರನ್ನು ಭೇಟಿಯಾಗಿ ಅವರ ಶ್ರಮವನ್ನು ಅರಿಯಲು ಸಾಧ್ಯವಾಗಿದ್ದು ಸಂತಸ ತಂದಿದೆ ಎಂದರು.

ರೈತರು ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದರೆ ಹೈಬ್ರೀಡ್ ಹಾಗೂ ಕುಲಾಂತರಿ ಬೀಜಗಳು. ಇವುಗಳು ರೈತರಿಗೆ ತಮ್ಮ ಭವಿಷ್ಯದ ಕ್ರಿಯೆಯನ್ನುನಿರ್ಧರಿಸಲು ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ. ಈ ಫಾರ್ಮಥಾನ್ ಗಳು ರೈತರನ್ನು ಪ್ರತಿ ವರ್ಷ ಅತಿ ಹೆಚ್ಚು ಲಾಭ ಮಾಡಿಕೊಳ್ಳುವ ಬಹುರಾಷ್ಟ್ರೀಯ ಕೃಷಿ ಸಂಸ್ಥೆಗಳ ಅಡಿಯಾಳಾಗದಂತೆ ತಡೆಯುತ್ತದೆ.

ರೈತ ಕೃಷ್ಣ ರೆಡ್ಡಿ ಪ್ರಕಾರ, ರೈತರು ನೀರು ಸಂರಕ್ಷಿಸಿ, ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿತಗೊಳಿಸಬೇಕು. ಜೊತೆಗೆ, ಇಳುವರಿ ಹೆಚ್ಚಳಕ್ಕೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಬೇಕು.

ಹೈದಾಬಾದ್ ಮೂಲದ ಎಸ್‍ವಿ ಆರ್ ತಂಡದ ಪ್ರಾಯೋಜಿತ ಫಾರ್ಮಥಾನ್ ಗಳು ರೈತ ಸಮುದಾಯಕ್ಕೆ ಹೊಸ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲು ಯೋಜಿಸಿದೆ. ಈ ಸಂಸ್ಥೆ ತಂತ್ರಜ್ಞಾನ ಬಳಕೆಯಿಂದ ರೈತರಿಗೆ ನೈಸರ್ಗಿಕ ವೈಪರಿತ್ಯಗಳನ್ನು ಎದುರಿಸಲು ನೆರವಾಗಲಿದೆ.

2022ರ ವೇಳೆಗೆ ಎಸ್ತಾ, ಭಾರತಾದ್ಯಂತ 40000 ರೈತರಿಗೆ ಬೆಂಬಲ ನೀಡುವ ಗುರಿ ಹೊಂದಿದೆ. ರಾಷ್ಟ್ರೀಯ ಫಾರ್ಮಥಾನ್, ರೈತರ ಸಂಗಮ, ಗ್ರಾಹಕರ ಚರ್ಚೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ನೈಸರ್ಗಿಕ ಕೃಷಿ ವಿಧಾನ ಹಾಗೂ ಕೃಷಿ ವಲಯದ ಸುಧಾರಣೆಗೆ ನೆರವಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ