ಪಿಎನ್‍ಬಿ ಹಗರಣ ಪ್ರಕರಣದ ಆರೋಪಿ ಮೆಹುಲ್‍ಚೋಕ್ಸಿ-ಭಾರತಕ್ಕೆಕರೆತರಲು ತಜ್ಞ ವೈದ್ಯರೊಂದಿಗೆ ಏರ್‍ಅಂಬ್ಯುಲೆನ್ಸ್

ನವದೆಹಲಿ, ಜೂ.23- ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 13,000ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್‍ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಜ್ಞ ವೈದ್ಯರೊಂದಿಗೆ ಏರ್ ಆಂಬುಲೆನ್ಸ್ ಒದಗಿಸುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

ಅನಾರೋಗ್ಯದಕಾರಣದಿಂದಾಗಿ ಭಾರತಕ್ಕೆ ಮರಳಲು ಆಗಲ್ಲಎಂದು ಮೆಹುಲ್‍ಚೋಕ್ಸಿಅಪಿಢವಿಟ್ ಸಲ್ಲಿಸಿರುವ ಹಿನ್ನೆಲೆಯಲ್ಲಿಜಾರಿ ನಿರ್ದೇಶನಾಲಯ ಈ ರೀತಿಯಲ್ಲಿ ಹೈಕೋರ್ಟ್‍ಗೆ ಪ್ರತಿ ಪ್ರಮಾಣಪತ್ರ ಸಲ್ಲಿಸಿದೆ.

ಅನಾರೋಗ್ಯದ ನೆಪವೊಡ್ಡಿ ಮೆಹುಲ್‍ಚೋಕ್ಸಿ ನ್ಯಾಯಾಂಗ ಪ್ರಕ್ರಿಯೆಯಿಂದ ದೂರ ಉಳಿಯಲು ಪ್ರಯತ್ನಿಸುತ್ತಿದ್ದಾನೆ. ಆಂಟಿಗುವಾದಿಂದ ಮೆಹುಲ್‍ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಜ್ಞ ವೈದ್ಯರೊಂದಿಗೆ ಏರ್‍ಅಂಬ್ಯುಲೆನ್ಸ್‍ ಒದಗಿಸಲು ಸಿದ್ಧವಿರುವುದಾಗಿ ಇಡಿ ತನ್ನಅಫಿಡವಿಟ್‍ನಲ್ಲಿ ತಿಳಿಸಿದೆ.

ತನಿಖೆ ವೇಳೆ ಜಾರಿ ನಿರ್ದೇಶನಾಲಯಚೋಕ್ಸಿಗೆ ಸೇರಿದ 2100 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, 6129 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಚೋಕ್ಸಿ ಹೇಳುತ್ತಿದ್ದು, ಆತ ಭಾರತದಿಂದ ಪಲಾಯನ ಮಾಡುವ ಮುನ್ನವೇತನ್ನೆಲ್ಲಾ ಆಸ್ತಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ಬಗ್ಗೆ ದಾಖಲೆಗಳನ್ನು ಇಡಿ ನಿರ್ವಹಣೆ ಮಾಡಿದೆಎಂದುಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ