ಬೆಂಗಳೂರು, ಜೂ. 22- ಬಿಬಿಎಂಪಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದ ಚಾಲಕರ ಮಗ ಅಥವಾ ಮಗಳಿಗೆ ಶಾಲಾ-ಕಾಲೇಜು ಶುಲ್ಕ ಭರಿಸಲಿದೆ.
ತರಗತಿಯಿಂದ ಪದವಿವರೆಗೂ ವ್ಯಾಸಂಗ ಮಾಡುತ್ತಿರುವ ಎಸ್ಸಿ, ಎಸ್ಟಿ, ಒಬಿಸಿ ಚಾಲಕರ ಒಂದನೇ ಒಬ್ಬ ಮಗ ಅಥವಾ ಒಬ್ಬ ಮಗಳಿಗೆ 50ಸಾವಿರದ ವರೆಗೆ ಬಿಬಿಎಂಪಿ ವತಿಯಿಂದ ಶುಲ್ಕ ಭರಿಸಲಾಗುತ್ತದೆ. ಪ್ರಸಕ್ತ ಸಾಲಿನಿಂದಲೇ ಇದು ಜಾರಿಯಾಗಲಿದೆ.
ಈ ಕುರಿತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಆಯುಕ್ತರಿಗೆ ಸಲ್ಲಿಸಿದ ಮನವಿಯನ್ನು ಪರಿಶೀಲಿಸಿ ಬಿಬಿಎಂಪಿ ವಿಶೇಷ ಆಯುಕ್ತರು (ಕಲ್ಯಾಣ) ಒಪ್ಪಿಗೆ ಸೂಚಿಸಿದ್ದು, ಈ ಸಾಲಿನಲ್ಲೇ ಎಸ್ಸಿ,ಎಸ್ಸ್ಟಿ ಮತ್ತು ಒಬಿಸಿ ವರ್ಗದ ಚಾಲಕರ ಮಗ ಅಥವಾ ಮಗಳಿಗೆ ಶಾಲಾ ಶುಲ್ಕ ಭರ್ತಿಯಾಗಲಿದೆ.