ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಂ ಇಂಡಿಯಾ: ಹೇಗಿದೆ ಗೊತ್ತ ಕೊಹ್ಲಿ ಸೈನ್ಯದ ಹೊಸ ಜೆರ್ಸಿ ?

ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ದದಲ್ಲಿ ಕೊಹ್ಲಿ ಸೈನ್ಯ ಜಭರ್ದಸ್ತ್ ಪರ್ಫಾಮನ್ಸ್ ಕೊಟ್ಟು ಗೆಲುವಿನ ನಾಗಲೋಟದಲ್ಲಿ ಮುಂದುವರೆದಿದೆ. ಆಡಿದ ಮೂರು ಪಂದ್ಯಗಳನ್ನ ಗೆದ್ದಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಟೀಂ ಇಂಡಿಯಾ ಜೆರ್ಸಿಗೆ ತನ್ನದೇ ಆದ ಇತಿಹಾಸವನ್ನ ಹೊಂದಿದೆ. 1992 ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಕಲ್ಲರ್ಫುಲ್ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು. ಈ ಟೂರ್ನಿ ಆದ ನಂತರ ಟೀಂ ಇಂಡಿಯಾ ಬ್ಲೂ ಜೆರ್ಸಿಯಲ್ಲೆ ಆಡಿಕೊಂಡು ಬಂದಿತ್ತು. ಈ ಕಾರಣಕ್ಕಾಗಿ ಟೀಂ ಇಂಡಿಯಾ ಅಂದ್ರೆ Men  In Blue,ಅಂತಾ ಅಡ್ಡ ಹೆಸರಿನಲ್ಲಿ ಕರೆಯುತ್ತಾರೆ. ಬ್ಲೂ ಜೆರ್ಸಿ ಎಷ್ಟು ಫೇಮಸ್ ಅಂದ್ರೆ ಕ್ರೀಡೆಯಲ್ಲಿ ಬ್ಲೂ ಜೆರ್ಸಿ ಅಂದ್ರೆ ಅದು ಟೀಂ ಇಂಡಿಯಾ ಅಂತಾನೆ ಕ್ರೀಡಾಭಿಮಾನಿಗಳು ಗುರುತಿಸುತ್ತಾರೆ.

 

 

 

 

 

 

ಆಂಗ್ಲರ ವಿರುದ್ಧ ಆರೆಂಜ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಜೂನ್ 30ರಂದು ಬರ್ಮಿಂಗ್ಯಾಮ್ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಆರೆಂಜ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಇದುವರೆಗೂ ಹಲವಾರು ದಶಕಗಳ ಕಾಲ ಬ್ಲೂ ಜೆರ್ಸಿಯಲ್ಲಿ ಆಡುತ್ತಾ ಬಂದಿದ್ದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಆರಂಜ್ ಜೆರ್ಸಿಯಲ್ಲಿ ಆಡಲಿದೆ.

ಒಂದೆ ಜೆರ್ಸಿಯಲ್ಲಿ ಆಡುವಂತಿಲ್ಲ ಉಭಯ ತಂಡಗಳು
ಹೌದು ಐಸಿಸಿಯ ಹೊಸ ನಿಯಮದ ಪ್ರಕಾರ ತನ್ನ ಪ್ರಾಯೋಜಕತ್ವದಲ್ಲಿ ನಡೆಯುವ ಟೂರ್ನಿಯಲ್ಲಿ ಎರಡೂ ತಂಡಗಳು ಒಂದೇ ಬಣ್ಣದ ಜೆರ್ಸಿಯಲ್ಲಿ ಆಡುವಂತಿಲ್ಲ. ಐಸಿಸಿಗೆ ಫುಟ್ಬಾಲ್ ಪ್ರೇರಣೆಯಾಗಿದೆ. ಫುಟ್ಬಾಲ್ನಲ್ಲಿ ಒಂದೇ ತಂಡ ತವರಿನಲ್ಲೊಂದು ವಿದೇಶದಲ್ಲೊಂದು ಜೆರ್ಸಿಯನ್ನ ತೊಟ್ಟು ಆಡುತ್ತವೆ. ಇದು ಐಸಿಸಿಗೂ ಪ್ರೇರಣೆಯಾಗಿದೆ. ವಿಶ್ವಕಪ್ ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ Confuse ಆಗಬಾರದು ಎನ್ನುವ ದೃಷ್ಟಿಯಿಂದ ಐಸಿಸಿ ಈ ನಿರ್ಧಾರವನ್ನ ಕೈಗೊಂಡಿದೆ.

ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ಇದಕ್ಕಾಗಿ 1992ರಲ್ಲಿ ತೊಟ್ಟಿದ್ದ ನೀಲಿ ಬಣ್ಣವನ್ನ ಈ ಬಾರಿ ಆಯ್ಕೆ ಮಾಡಿಕೊಂಡಿದೆ. ಅಂದಿನ ವಿಶ್ವಕಪ್ನಲ್ಲಿ ಇದೇ ಜೆರ್ಸಿಯಲ್ಲಿ ಕಣಕ್ಕಿಳೀದ್ದ ಆಂಗ್ಲರು ಫೈನಲ್ವರೆಗೂ ಹೋಗಿದ್ರು. ಹೀಗಾಗಿ ಈ ಬಾರಿ ಅಂದಿನ ಜೆರ್ಸಿಯಲ್ಲಿ ಆಡ್ತಿದೆ.

ಆರೆಂಜ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಕೊಹ್ಲಿ ಸೈನ್ಯ
ಟೀಂ ಇಂಡಿಯಾ ಬ್ಲೂ ಜೆರ್ಸಿಯಲ್ಲಿ ಆಡಿಕೊಂಡು ಬಂದಿದೆ. ಅದ್ಹೇಗೆ ಬೇರೆ ತಂಡಕ್ಕೋಸ್ಕರ ಬೇರೆ ಬಣ್ಣದ ಜೆರ್ಸಿಯಲ್ಲಿ ಆಡಬೇಕಾ ಅಂತ ನೀವು ಪ್ರಶ್ನಿಸಬಹುದು. ಆದರೆ ಐಸಿಸಿ ನಿಯಮದ ಪ್ರಕಾರ , ಐಸಿಸಿ ಪ್ರಯೋಜತ್ವದಲ್ಲಿ ನಡೆಯುವ ಟೂರ್ನಿಯಲ್ಲಿ ಆತಿಥೇಯ ವಹಿಸಿರುವ ತಂಡ ಬಿಟ್ಟು ಬೇರೆ ಎಲ್ಲ ತಂಡಗಳು ಬೇರೆ ಬೇರೆ ಜೆರ್ಸಿಯಲ್ಲಿ ಆಡಬೇಕು. ಆತಿಥೇಯ ವಹಿಸಿರುವ ತಂಡ ಯಾವ ಬಣ್ಣವನ್ನ ಬೇಕಾದ್ರೆ ಆಯ್ಕೆ ಮಾಡಿಕೊಳ್ಳಬಹುದು.ಆದರೆ ಇಡೀ ಟೂರ್ನಿಯಲ್ಲಿ ಆತಿಥೇಯ ವಹಿಸಿರುವ ತಂಡ ಒಂದೇ ಜೆರ್ಸಿಯಲ್ಲಿ ಆಡಬೇಕು. ಹೀಗಾಗಿ ಟೀಂ ಇಂಡಿಯಾ ಆರಂಜ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಬರೀ ಇಂಗ್ಲೆಂಡ್ ಮಾತ್ರವಲ್ಲ ಐಸಿಸಿ ನಿಯಮ ಬೇರೆ ತಂಡಗಳಿಗೂ ಅನ್ವಯ ಆಗೋದೇ ಆದ್ರೆ ಆಕಾಶ ನೀಲಿ ಬಣ್ಣದ ಜೆರ್ಸಿ ಹೊಂದಿರುವ ಶ್ರೀಲಂಕಾ ಮತ್ತು ಆಫ್ಘಾನಿಸ್ಥಾನ ವಿರುದ್ದವೂ ಟೀಂ ಇಂಡಿಯಾ ಬೇರೆ ಜೆರ್ಸಿಯಲ್ಲಿ ಆಡಬೇಕಾಗುತ್ತದೆ. ಆದರೆ ಹೊಸ ಜೆರ್ಸಿಯಲ್ಲಿ ಟೀಂ ಇಂಡಿಯಾ ಆಡುವ ಕುರಿತು ಬಿಸಿಸಿಐ ಇದುವರೆಗೂ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ.

ಒಟ್ಟಿನಲ್ಲಿ ಹೊಸ ಜೆರ್ಸಿಯಲ್ಲಿ ಟೀಂ ಇಂಡಿಯಾ ಹೇಗೆ ಕಣಕ್ಕಿಳುತ್ತೆ ಅನ್ನೊದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ