ದಲಿತರ ಜಮೀನಿನಲ್ಲಿ ಕಟ್ಟಡ ನಿರ್ಮಾಣ-ಖಂಡಿಸಿ ದಲಿತ ಕ್ರಿಯಾ ಸಮಿತಿಯಿಂದ ಚಳುವಳಿ

ಬೆಂಗಳೂರು, ಜೂ.21-ದಲಿತರಿಗೆ ಸೇರಬೇಕಾದ ಜಮೀನಿನಲ್ಲಿ ಕಟ್ಟಡ ನಿರ್ಮಿಸುತ್ತಿರುವುದನ್ನು ಖಂಡಿಸಿ ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜೂ. 24ರಂದು ತಮಟೆ ಚಳವಳಿ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಬಿ.ಆರ್.ಮುನಿರಾಜ್ ಮಾತನಾಡಿ, ಯಲಹಂಕ ತಾಲ್ಲೂಕು, ಜಾಲ ಹೋಬಳಿ ಬೇಗೂರು ಗ್ರಾಮದ ಸರ್ವೆ ನಂಬರ್ 21/1, 21/2ರಲ್ಲಿನ 3 ಎಕರೆ 31 ಗುಂಟೆ ಜಮೀನಿನನ್ನು ಅಧಿಕಾರಿಗಳ ಕುಮ್ಮಕ್ಕಿನಿಂದ ನಕಲಿ ರೀಗ್ರ್ಯಾಂಟ್ ಆದೇಶವನ್ನು ತೋರಿಸಿ ಚಿಕ್ಕನಹಳ್ಳಿ ಗ್ರಾಮದ ನಾಗರಾಜು ಎಂಬವರು ಈ ಜಾಗವನ್ನು ಕಬಳಿಸಲು ನಕಲಿ ದಾಖಲಾತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ತಮಟೆ ಚಳವಳಿಯನ್ನು ಯಲಹಂಕ ಕೋಗಿಲು ಸರ್ಕಲ್‍ನಿಂದ ಯಲಹಂಕ ತಾಲ್ಲೂಕು ಕಛೇರಿವರೆಗೆ ಚಳವಳಿ ಹಮ್ಮಿಕೊಂಡಿರುದಾಗಿ ಮುನಿರಾಜ್ ತಿಳಿಸಿದರು
.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ