ಬೆಂಗಳೂರು, ಜೂ. 21- ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜೂ. 24ರಂದು ಜಯ ಕರ್ನಾಟಕ ಸಂಘಟನೆ ವತಿಯಿಂದ ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಮಾತನಾಡಿ, ಬಳ್ಳಾರಿಯಲ್ಲಿ 3,667 ಎಕರೆ ಭೂಮಿಯನ್ನು ಜಿಂದಾಲ್‍ಗೆ ಪರಭಾರೆ ಮಾಡಲು ಮುಂದಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಜಿಂದಾಲ್‍ಗೆ ಭೂಮಿ ನೀಡಲೇಬೇಕೆಂದಿದ್ದರೇ ಸ್ಥಳೀಯ ಜನರಿಗೆ ಉದ್ಯೋಗ ಒದಗಿಸಬೇಕು. ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡದೇ ಲೀಸ್‍ಗೆ ಕೊಡಲಿ, ಭೂಮಿಯನ್ನು ಭೋಗ್ಯಕ್ಕೆ ಕೊಡುವಾಗ ರೈತರನ್ನು ಪಾಲುದಾರರನ್ನಾಗಿಸಬೇಕು ಅಥವಾ ಕಂಪನಿಯ ಷೇರುದಾರರೆಂದು ಪರಿಗಣಿಸಬೇಕು. ಮತ್ತು ಕಂಪನಿಗೆ ಬರುವ ಲಾಭಾಂಶವನ್ನು ರೈತರಿಗೂ ಹಂಚಬೇಕು ಎಂದು ಆಗ್ರಹಿಸಿದರು.
ಭೂವಿಯನ್ನು ಲೀಸ್‍ಗೆ ಕೊಟ್ಟ ರೈತರ ಮಕ್ಕಳಿಗೆ ಕಂಪನಿಯಲ್ಲಿ ಕಡ್ಡಾಯವಾಗಿ ಉದ್ಯೋಗ ನೀಡಬೇಕು, ಸ್ಥಳೀಯ ಕನ್ನಡಿಗರಿಗೆ ಹಾಗೂ ಉತ್ತರಕರ್ನಾಟಕ ಭಾಗದ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಇವೆಲ್ಲಾ ಅಂಶಗಳು ಕಾನೂನಾತ್ಮಕವಾಗಿ ನಡೆದರೆ ಸರ್ಕಾರ ಜಿಂದಾಲ್‍ಗೆ ಭೂಮಿ ನೀಡಲಿ ಎಂದು ಹೇಳಿದರು.
ಆದರೆ ಕಾನೂನುಗಳನ್ನು ತಿರುಚಿ ರೈತರನ್ನು ಸಂಕಷ್ಟಕ್ಕಿಡು ಮಾಡುತ್ತಿರುವುದು ಖಂಡನೀಯ.ಜಿಂದಾಲ್‍ಗೆ ಭೂಮಿ ನೀಡುವ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ವತಿಯಿಂದ ಇದೇ 24ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಂಘಟನೆಯ ಕಾರ್ಯಕರ್ತರು ಅಂದು ಬೆಳಿಗ್ಗೆ ಟೌನ್‍ಹಾಲ್ ಬಳಿ ಸಮಾವೇಶಗೊಂಡು ನಂತರ ಮೆರವಣಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಆರ್.ಚಂದ್ರಪ್ಪ ಹೇಳಿದರು.