ಕೊಹ್ಲಿ ಸೈನ್ಯದ ಪರಾಕ್ರಮ್ಕಕೆ ಬಲಿಷ್ಠ ತಂಡಗಳೇ ಉಡೀಸ್: ವಿಶ್ವಕಪ್ನಲ್ಲಿ ಬ್ಲೂ ಬಾಯ್ಸ್ ಸೆಮೀಸ್ ಹಾದಿ ಸುಗಮ..!

ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾಕ್ಕೆ ಸೆಮಿಫೈನಲ್ ಹಾದಿ ಸುಗಮಗೊಂಡಿದೆ. ಆರಂಭಿಕ ಪಂದ್ಯಗಳಲ್ಲಿಯೇ ಬಲಿಷ್ಠ ತಂಡಗಳಾದ ದ.ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳಿಗೆ ಸೋಲಿನ ರುಚಿ ತೋರಿಸಿದೆ. ಉಳಿದ ಐದು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.. ಹೌದು ಯಾಕೆಂದರೆ ಇಂಗ್ಲೆಂಡ್ ಬಿಟ್ಟರೆ ಇತರೆ ತಂಡಗಳು ಟೀಮ್ ಇಂಡಿಯಾಕ್ಕೆ ಸೆಡ್ಡು ಹೊಡೆಯಬಲ್ಲ ತಾಕತ್ತು ಹೊಂದಿಲ್ಲ..

ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿವ ಮೂಲಕ ಟೀಮ್ ಇಂಡಿಯಾ ಮೂಲಕ ತನ್ನ ಅಭಿಮಾನ ಆರಂಭಿಸಿತು. 2ನೇ ಪಂದ್ಯದಲ್ಲುಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 36 ರನ್ಗಳ ಅಂತದಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದಾದ್ರೆ. ನಾಲ್ಕನೇ ಪಂದ್ಯದಲ್ಲಿ ಪಾಕ್ ವಿರುದ್ಧ 89ರನ್ಗಳ ಭರ್ಜರಿ ಜಯ ಸಾಧಿಸಿತು.

9 ಪಂದ್ಯಗಳ ಪೈಕಿ ಈಗಾಗಲೇ ನಾಲ್ಕು ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ, ಉಳಿದ ಐದು ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಸುಲಭ ಗೆಲುವು ಸಾಧಿಸುವುದು ಪಕ್ಕ…

ಜೂನ್ : 21 ಕ್ರಿಕೆಟ್ ಅಫ್ಘಾನ್ ವಿರುದ್ಧ ಸೆಣಸು
ವಿಶ್ವಕಪ್ನ ನಾಲ್ಕನೇ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕ್ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ, ತನ್ನ ಮುಂದಿನ ಪಂದ್ಯದಲ್ಲಿ ಕ್ರಿಕೆಟ್ ಶಿಶು ವಿರುದ್ಧ ಸೆಣಸಾಡಲಿದೆ. ಸೌಥಾಂಫ್ಟನ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವುದು ಪಕ್ಕ.. ಕ್ರಿಕೆಟ್ ಶಿಶು ಆಗಿರುವ ಅಫ್ಘಾನ್ ಅಂಕಪಟ್ಟೊಯಲ್ಲಿ ಕೊನೆ ಸ್ಥಾನದಲ್ಲಿದ್ದು ಟೀಮ್ ಇಂಡಿಯಾಕ್ಕೆ ಸೆಡ್ಡು ಹೊಡಯಬಲ್ಲ ತಾಕತ್ತು ಹೊಂದಿಲ್ಲ.. ಅಲ್ದೇ ತಂಡದಲ್ಲಿನ ಒಳ ಜಗಳದಿಂದ ಬೇಸತ್ತಿರುವ ಅಫ್ಘಾನ್ ವಿರುದ್ಧ ಟೀಮ್ ಇಂಡಿಯಾ ಗೆಲುವು ಸಾಧಿಸೋದ್ರಲ್ಲಿ ಡೌಟೇ ಇಲ್ಲ..

ಜೂನ್ : 27 ವೆಸ್ಟ್ ವಿಂಡೀಸ್ ವಿರುದ್ಧ ಹೋರಾಟ..
ಕ್ರಿಕೆಟ್ ಶಿಶು ಅಫ್ಘಾನ್ ಪಂದ್ಯದ ಬಳಿಕ ಟೀಮ್ ಇಂಡಿಯಾ, ವೆಸ್ಟ್ ವಿಂಡೀಸ್ ವಿರುದ್ಧ ಹೋರಾಟ ನಡೆಸಲಿದೆ. ವಿಂಡೀಸ್ ತಂಡದಲ್ಲಿ ಬಲಷ್ಠ ಆಟಗಾರರ ದಂಡೇ ಇದೆ. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟಗಾರರು ಇದ್ದರು. ಸ್ಥಿರ ಪ್ರದರ್ಶನ ನೀಡೋದ್ರಲ್ಲಿ ವಿಂಡೀಸ್ ಆಟಗಾರರು ವಿಫಲರಾಗಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ತಿರುಗಿ ಬೀಳೋಕೆ ಮುಂದಾದ್ರು, ಅಂತಹ ಆಟಗಾರರಿಗೆ ಬ್ರೇಕ್ ಹಾಕಬಲ್ಲ ಬೌಲರ್ಗಳಿದ್ದಾರೆ.. ಜೊತೆಗೆ ಚಾಣಕ್ಷ ಆಟಗಾರರು ನಮ್ಮಲ್ಲಿ ಇರೋದ್ರಿಂದ ವಿಂಡೀಸ್ ವಿರುದ್ಧ ಟೀಮ್ ಇಂಡಿಯಾ ಗೆಲುವು ಸಾಧಿಸೋದ್ರಲ್ಲಿ ಅನುಮಾನವೇ ಇಲ್ಲ..

ಜೂನ್ 30: ಇಂಗ್ಲೆಂಡ್ ವಿರುದ್ಧ ಪ್ರಬಲ ಪೈಪೋಟಿ ಗ್ಯಾರಂಟಿ
ಜೂನ್ 30ರಂದು ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೆಣಸಾಡಲಿದ್ದು, ಉಭಯ ತಂಗಳ ನಡುವೆ ಪ್ರಬಲ ಪೈಪೋಟಿ ಇರೋದು ಅಂತೂ ಪಕ್ಕ.. ಬ್ಯಾಟಿಂಗ್ ವಿಭಾಗದಲ್ಲಿ ಪಂದ್ಯದಿಂದ ಪಂದ್ಯಕ್ಕೆ ಆಗ್ಲ ಪಡೆ ಸಖತ್ ಶೈನ್ ಆಗ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಟಫ್ ಫೈಟ್ ಇರೋದಂತೂ ಗ್ಯಾರಂಟಿ. ಆದ್ರೆ, ಅತಿಥೇಯ ಇಂಗ್ಲೆಂಡ್ಗೆ ಟಕ್ಕರ್ ನೀಡಬಲ್ಲ ತಾಕತ್ತು ಟೀಮ್ ಇಂಡಿಯಾಕ್ಕೆ ಇದೆ.. ಅಲ್ಲದೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ಬ್ರೇಕ್ ಹಾಕಬಲ್ಲ ವೇಗಿಗಳು ಟೀಮ್ ಇಂಡಿಯಾದಲ್ಲಿದ್ದಾರೆ.. ಬ್ಯಾಟಿಂಗ್ ಬೌಲಿಂಗ್ನಲ್ಲಿ ಅತಿಥೇಯ ಇಂಗ್ಲೆಂಡ್ ಸರಿಸಾಟಿಯಾಗಿ ಟೀಮ್ ಇಂಡಿಯಾ ಇರೋದ್ರಿಂದ ಇಲ್ಲಿ ಬಿಗ್ ವಾರ್ ನಡೆಯೋದಂತು ಗ್ಯಾರಂಟಿ..

ಜುಲೈ 2 : ಟೀಮ್ ಇಂಡಿಯಾ ವಿರುದ್ಧ ಸೆಣಸಲಿದೆ ಬಾಂಗ್ಲಾ
ಇನ್ನೂ ಜುಲೈ 2ರಂದು ಬರ್ಮಿಂಗ್ಹ್ಯಾಮ್ ಅಂಗಳ ಟೈಗರ್ಸ್ ವರ್ಸಸ್ ಟೈಗರ್ಸ್ ಕಾದಾಟಕ್ಕೆ ಸಾಕ್ಷಿಯಾಗಲಿದೆ.. ವಿಶ್ವಕಪ್ನಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರು, ಅದ್ಬುತ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಸಾಕ್ಷಿ ವಿಂಡಿಸ್ ವಿರುದ್ಧದ ಪಂದ್ಯದಲ್ಲಿ 326 ರನ್ಗಳ ಗೆಲುವಿನ ಟಾರ್ಗೆಟ್ ಅನ್ನ 42 ಓವರ್ಗಳಲ್ಲಿ ಮುಟ್ಟಿದ್ದು. ಸೌಮ್ಯ ಸರ್ಕಾರ್, ತಮೀಮ್ ಇಕ್ಬಾಲ್, ಶಕೀಬ್ ಹಲ್ ಹಸನ್ ಬ್ಯಾಟಿಂಗ್ ಮೂಲಕವೇ ಟೂರ್ನಿಯಲ್ಲಿ ಗಮನ ಸೆಳೆದಿದ್ದಾರೆ. ಇವ್ರ ಬ್ಯಾಟಿಂಗ್ಗೆ ಬ್ರೇಕ್ ಹಾಕಬಲ್ಲ.. ಬೌಲರ್ಗಳ ದಾಳಿಯನ್ನ ಉಡೀಸ್ ಮಾಡಬಲ್ಲ ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧವೂ ಟೀಮ್ ಇಂಡಿಯಾ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಇಲ್ಲ..

ಇನ್ನೂ ಜುಲೈ 6ರಂದು ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಸೆಣಸಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸುಲಭ ಗೆಲುವು ಗ್ಯಾರಂಟಿ.. ವಿಶ್ವಕ್ರಿಕೆಟ್ನಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಶ್ರೀಲಂಕಾ ಹಲ್ಲು ಇಲ್ಲದ ಹಾವಿನಂತಾಗಿದೆ. ಪ್ರತಿಭಾವಂತ ಆಟಗಾರರು ತಂಡದಲ್ಲಿ ಇದ್ರು. ಹೋರಾಟ ಮನೋಭಾವ ಕಳೆದುಕೊಂಡಿದೆ. ಹೀಗಾಘಿ ಮೈದಾನದಲ್ಲಿ ಸೈನಿಕರಂತೆ ಹೋರಾಡುವ ಟೀಮ್ ಇಂಡಿಯಾ ಮುಂದೆ ಶ್ರೀಲಂಕಾ ಲೆಕ್ಕಕ್ಕಿಲ್ಲದಂತಾಗಿದೆ..

ಒಟ್ನಲ್ಲಿ ಬಲಿಷ್ಠ ತಂಡಗಳಿಗೆ ಟಕ್ಕರ್ ಕೊಟ್ಟಿರೋ ಟೀಮ್ ಇಂಡಿಯಾ, ಅಜೇಯವಾಗಿ ಸೆಮಿಫೈನಲ್ ಪ್ರವೇಶಿರುವುದರಲ್ಲಿ ಅಚ್ಚರಿ ಇಲ್ಲ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ