ಹೊಸ ಹೇರ್ ಸ್ಟೈಲ್ನಲ್ಲಿ ಕಣಕ್ಕಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ: ಯಾರ ಹೇರ್ಸ್ಟೈಲ್ ಬೆಸ್ಟ್ ಎಂದು ಕೇಳಿದ ಬಿಸಿಸಿಐ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿನ ನಾಗಲೋಟದಲ್ಲಿ ತೇಲಾಡ್ತಿದೆ. ಮೊನ್ನೆ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಗೆದ್ದಿದೆ ತಡ ಕ್ಯಾಪ್ಟನ್ ಕೊಹ್ಲಿ, ಸೇರಿದಂತೆ ತಂಡದ ಕೆಲ ಆಟಗಾರರು ಹೊಸ ಹೇರ್ ಸ್ಟೈಲ್ನೊಂದಿಗೆ ಬಂದಿದ್ದಾರೆ. ಹಾಗಾದ್ರೆ ಬನ್ನಿ ಯಾವೆಲ್ಲ ಆಟಗಾರರ ಹೇರ್ ಸ್ಟೈಲ್ ಹೇಗಿದೆ ಅನ್ನೋದನ್ನ ನೋಡೋಣ.

ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮುನ್ನಗ್ಗುತ್ತಿರುವ ಟೀಂ ಇಂಡಿಯಾ ಇದೀಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದೆ. ತಂಡದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಮತ್ತು ಆಲ್ರೌಂಡರ್ ವಿಜಯ್ ಶಂಕರ್ ಅನುಪಸ್ಥಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ ಕ್ರಿಕೆಟ್ ಶಿಶುಗಳೆದರು ಭಾರೀ ಅಂತರದಲ್ಲಿ ಗೆಲ್ಲಲು ಪ್ಲಾನ್ ಮಾಡಿದೆ.

ಹೇರ್ ಸ್ಟೈಲ್ ಬದಲಿಸಿದ ಟೀಂ ಇಂಡಿಯಾ ಆಟಗಾರರು
ಬದ್ಧವೈರಿ ಪಾಕಿಸ್ತಾನ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಹೇರ್ ಸ್ಟೈಲ್ ಬದಲಿಸಿದ್ದಾರೆ. ವಿಶೇಷ ಅಂದರೆ ಎಲ್ಲರೂ ಒಂದೇ ರೀತಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.ಪಾಕಿಸ್ತಾನ ಪಂದ್ಯದ ಬಳಿಕ ಅಫ್ಘಾನಿಸ್ತಾನ ಪಂದ್ಯಕ್ಕೆ 5 ದಿನಗಳ ಅಂತರವಿದೆ. ಹೀಗಾಗಿ ರಿಲಾಕ್ಸ್ ಮೂಡ್‌ಗೆ ಜಾರಿರುವ ಟೀಂ ಇಂಡಿಯಾ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಮಿಂಚುತ್ತಿದೆ.

ನಾಯಕ ವಿರಾಟ್ ಕೊಹ್ಲಿ, ಎಂ,ಎಸ್.ಧೋನಿ, ಹಾರ್ದಿಕ್ ಪಾಂಡ್, ಯಜುವೇಂದ್ರ ಚಹಾಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ನೂತನ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದಾರೆ.

ಖ್ಯಾತ ಹೇರ್‌ಸ್ಟೈಲ್ ವಿನ್ಯಾಸಕಾರ ಅಲಿಂ ಹಕೀಮ್ ಟ್ವಿಟರ್ ಖಾತೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ನೂತನ ಹೇರ್ ಸ್ಟೈಲ್ ಕುರಿತು ಬೆಳುಕು ಚೆಲ್ಲಿದ್ದಾರೆ. ಸೈಡ್ ಫುಲ್ ಟ್ರಿಮ್ ಮಾಡಿಸಿಕೊಂಡು, ಟಾಪ್ ಹೇರ್ ಲಾಂಗ್ ಬಿಟ್ಟಿದ್ದಾರೆ. ಟೀಂ ಇಂಡಿಯಾದಲ್ಲಿ ಹೇರ್‌ಸ್ಟೈಲ್ ಹೊಸದಲ್ಲ. ಎಂ.ಎಸ್.ಧೋನಿಯಿಂದ ಆರಂಭಗೊಂಡ ಹೇರ್‌ಸ್ಟೈಲ್ ಮಾಡೆಲಿಂಗ್ ಬಳಿಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಇದೀಗ ಹಾರ್ದಿಕ್ ಪಾಂಡ್ಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಕೂಲೆಸ್ಟ್ ಹೇರ್ ಯಾರದ್ದು ಎಂದು ಕೇಳಿದ ಬಿಸಿಸಿಐ
ಟೀಂ ಇಂಡಿಯಾ ಆಟಗಾರರು ಹೊಸ ಹೇರ್ ಸ್ಟೈಲ್ನೊಂದಿಗೆ ಕಾಣಿಸಿಕೊಂಡಿದ್ದೆ ತಡ. ಆಡಳಿತ ಮಂಡಳಿ ಬಿಸಿಸಿಐ ಇವರಲ್ಲಿ ಯಾರದ್ದು ಕೂಲೆಸ್ಟ್ ಹೇರ್ ಕಟ್ ಎಂದು ಅಭಿಮಾನಿಗಳನ್ನ ಟ್ವೀಟರ್ನಲ್ಲಿ ಕೇಳಿದೆ. ಇದಕ್ಕೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಕೆಲವರು ಧೋನಿ ಎಂದು ಹೇಳಿದ್ರೆ ಇನ್ನು ಕೆಲವರು ವಿರಾಟ್ ಕೊಹ್ಲಿ ಎಂದಿದ್ದಾರೆ ಇನ್ನು ಕೆಲವರು ಒಂದು ಹೆಜ್ಜೆ ಉಂದೆ ಹೋಗಿ ರವಿ ಶಾಸ್ತ್ರಿ ಅಂತ ಹೇಳಿ ಕಿಂಡಲ್ ಮಾಡಿದ್ದಾರೆ.

ಒಟ್ನಲ್ಲಿ ಟೀಂ ಇಂಡಿಯಾ ಆಟಗಾರರ ಹೊಸ ಹೇರ್ಸ್ಟೈಲ್ ಗೆ ಅಭಿಮಾನಿಗಳು ಫಿಲ್ ಫಿದಾ ಆಗಿದ್ದಾರೆ. ಆಫ್ಘಾನ್ವಿರುದ್ಧದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನ ಹೊಸ ಸ್ಟೈಲ್ನಲ್ಲಿ ನೋಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ