ಈ ಬಾರಿಯ ವಿಶ್ವಕಪ್ನಲ್ಲಿ ಇಂಜುರಿ ಸಮಸ್ಯೆ ಕೆಲವು ತಂಡಗಳನ್ನ ಕಾಡಿದೆ. ಮಹಾ ಯುದ್ದದ್ದಲ್ಲಿ ಗೆಲ್ಲಬೇಕೆಂದು ಪಣ ತೊಟ್ಟು ನಿಂತಿರುವ ಹತ್ತು ತಂಡಗಳು ರಣಾಂಗಣದಲ್ಲಿ ಇನ್ನಿಲ್ಲದಂತೆ ಹೋರಾಡುತ್ತಿವೆ. ಇದರ ಮಧ್ಯೆ ಇಂಜುರಿ ಸಮಸ್ಯೆ ಎಲ್ಲ ತಂಡದ ಕ್ಯಾಪ್ಟನ್ ಗಳಿಗೆ ತಲೆ ನೋವಾಗಿದೆ. ಬನ್ನಿ ಹಾಗಾದ್ರೆ ಯಾವೆಲ್ಲ ಆಟಗಾರರು ಇಂಜುರಿ ಸಮಸ್ಯೆಗೆ ಗುರಿಯಾಗಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ.
ಇಂಜುರಿಗೆ ಗುರಿಯಾದ ಸ್ವಿಂಗ್ ಕಿಂಗ್ ಭುವಿ
ಈ ಬಾರಿಯ ವಿಶ್ವಕಪ್ನಲ್ಲಿ ಟೀಂ ಡಬಲ್ ಶಾಕ್ ಅನುಭವಿಸಿದೆ. ಆಡಿದ ಎಲ್ಲ ಮೂರು ಪಂದ್ಯಗಳನ್ನ ಗೆದ್ದಿರುವ ಕೊಹ್ಲಿ ಸೈನ್ಯ ಸಂಭ್ರಮ ಪಡುವ ಸಮಯದಲ್ಲೆ ಆಘಾತಗಳನ್ನ ಅನುವಿಸಿದೆ. ತಂಡದ ಓಪನರ್ ಶಿಖರ್ ಧವನ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಟೂನಿ್ಯಿಂದಲ್ಲೇ ಹೊರ ನಡೆದಿದ್ದಾರೆ. ಇವರಷ್ಟೆ ಅಲ್ಲ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಇಂಜುರಿಗೆ ಗುರಿಯಾಗಿದ್ದಾರೆ. ಮೊನ್ನೆ ಮ್ಯಾಚೆಂಸ್ಟರ್ ಅಂಗಳದಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಬೌಲಿಂಗ್ ಮಾಡುವ ವೇಳೆ ಎಡಗೈನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ರು. ಡೆತ್ ಓವರ್ನಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕಂಟಕವಾಗಿದ್ದ ಭುವಿ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧ ರನ್ ವೇಗಕ್ಕೆ ಕಡಿವಾಣ ಹಾಕಿ ಒತ್ತಡ ಹಾಕ್ತಿದ್ರು.
ಸದ್ಯ ಭುವನೇಶ್ವರ್ ಕುಮಾರ್ ಮುಂಬರುವ ಆಫ್ಘಾನಿಸ್ತಾನ ವಿರುದ್ಧಧ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ತಂಡದಲ್ಲಿ ಗಾಯಗೊಂಡ ಎರಡನೇ ಬೌಲರ್ ಆಗಿದ್ದಾರೆ. ಧವನ್ ಅವರ ಸ್ಥಾನವನ್ನ ಬೆಂಗಾಲಿ ಪೇಸರ್ ಮೊಹಮದ್ ಶಮಿ ರಿಪ್ಲೇಸ್ ಮಾಡುವ ಫೇವರಿಟ್ ಪ್ಲೇಯರ್ ಆಗಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಗಾಯಗೊಂಡಿದ್ದ ಆಲ್ರೌಂಡರ್ ಸ್ಟೋಯ್ನಿಸ್
ಇನ್ನು ಆಸ್ಟ್ರೆಲಿಯಾ ತಂಡದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಇಂಜುರಿಗೆ ಗುರಿಯಾಗಿ ತಂಡದ ಪ್ಲೇಯಿಂಗ್ ಇಲೆವೆನ್ನಿಂದ ಆಡುತ್ತಿಲ್ಲ. ಒವೆಲ್ ಅಂಗಳದಲ್ಲಿ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಸ್ಟೋಯ್ನಿಸ್ SIDE STRAINSIಗೆ ಗುರಿಯಾದ್ರು. ಇದರ ಪರಿಣಾಮ ಸ್ಟೋಯ್ನಿಸ್ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಿಲ್ಲ. ಸದ್ಯ ಇಂಜುರಿಯಿಂದ ಹೊರ ಬರಲು ಈ ಆಸಿಸ್ ಆಟಗಾರ ಪರದಾಡುತ್ತಿದ್ದಾರೆ.
ಹ್ಯಾಮ್ಸ್ಟಿಂಗ್ ಇಂಜುರಿಯಿಂದ ಬಳಲುತ್ತಿದ್ದಾರೆ ಜಾಸನ್ ರಾಯ್
ಇನ್ನು ಚೊಚ್ಚಲ ವಿಶ್ವಕಪ್ ಕನಸು ಕಾಣುತ್ತಿರುವ ಆತಿಥೇಯ ಇಂಗ್ಲೆಂಡ್ ತಂಡ ಕೂಡ ಇಂಜುರಿಯಿಂದ ಹೊರತಾಗಿಲ್ಲ. ಟೂರ್ನಿಗೂ ಮುನ್ನ ಕ್ಯಾಪ್ಟನ್ ಇಯಾನ್ ಮಾರ್ಗನ್, ಕ್ರಿಸ್ ವೋಕ್ಸ್ ಇಂಜುರಿಗೆ ಗುರಿಯಾಗಿ ಮತ್ತೆ ತಂಡಕ್ಕೆ ಮರಳಿದ್ರು. ಇದೀಗ ತಂಡದ ಡ್ಯಾಶಿಂಗ್ ಓಪನರ್ ಜಾಸನ್ ರಾಯ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಮ್ಸ್ಟ್ರಿಂಗ್ ಇಂಜುರಿಗೆ ಗುರಿಯಾದ್ರು. Decent ಓಪನಿಂಗ್ ಕೊಡೊ ಜಾಸನ್ ರಾಯ್ ಮೊನ್ನೆ ಆಫ್ಘಾನ್ ವಿರುದ್ಧದ ಪಂದ್ಯದ್ಲಲೂ ಆಡಿಲ್ಲ. ಜಾಸನ್ ರಾಯ್ ಇನ್ನಷ್ಟೆ ಇಂಜುರಿಯಿಂದ ಹೊರ ಬಂದು ತಂಡಕ್ಕೆ ಬರಬೇಕಿದೆ.
ಭುಜದ ನೋವಿನಿಂದ ವಿಶ್ವಕಪ್ನಿಂದ ಔಟಾದ ವೇಗಿ ಡೇಲ್ ಸ್ಟೇನ್
ಸೌತ್ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಗೆ ಇದು ಕೊನೆಯ ವಿಶ್ವಕಪ್ ಆಗಿತ್ತು. ಆದರೆ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಡೇಲ್ ಸ್ಟೇನ್ ಭುಜದ ನೋವಿಗೆ ಗುರಿಯಾದ್ರು. ಬುಲೆಟ್ ವೇಗದಲ್ಲಿ ಚೆಂಡನ್ನ ಎಸೆಯುವ ಸ್ಟೇನ್ ಕೊನೆಯ ವಿಶ್ವಕಪ್ ಆಡಬೇಕೆಂಬ ಮಹಾದಾಸೆಯನ್ನ ಇಟ್ಟುಕೊಂಡಿದ್ರು. ಈ ಎಲ್ಲ ಕನಸುಗಳು ಕನಸಾಗಿಯೇ ಉಳಿದಿದೆ. ಇನ್ನು ತಂಡದ ಮತ್ತೊರ್ವ ಬೌಲರ್ ಲುಂಗಿ ಗಿಡಿ ಇಂಜುರಿಯಿಂದ ಹೊರ ಬಂದು ನ್ಯೂಜಿಲೆಂಡ್ ವಿರುದ್ಧ ಆಡಿದ್ದಾರೆ. ಡೇಲ್ ಸ್ಟೇನ್ ತಂಡದಲ್ಲಿ ಇಲ್ಲದೇ ಇರೋದ್ರಿಂದಲೇ ಸೌತ್ ಆಫ್ರಿಕಾ ತಂಡ ಟೂರ್ನಿಯಲ್ಲಿ ಬರೀ ಸೋಲುಗಳನ್ನೆ ಕಾಣುತ್ತ ಬಂದು ಟೂರ್ನಿಯಿಂದಲೇ ಹೊರ ಬೀಳುವ ಭೀತಿಯಲ್ಲಿದೆ.
ಒಟ್ಟಾರೆ ಇಂಜುರಿ ಸಮಸ್ಯೆ ಎಲ್ಲ ತಂಡಕ್ಕೂ ಪೆಡಂಭೂತದಂತೆ ಕಾಡಿದ್ದು ಎಲ್ಲ ತಂಡಗಳಿಗೂ ಇದು ದೊಡ್ಡ ತಲೆ ನೋವಾಗಿದೆ/.