ಒಂದು ರಾಷ್ಟ್ರ, ಒಂದು ಚುನಾವಣೆ-ಪರಿಕಲ್ಪನೆ ಈ ಸಮಯಕ್ಕೆ ಅಗತ್ಯವಾಗಿದೆ-ರಾಷ್ಟ್ರಪತಿ ಕೋವಿಂದ್

ನವದೆಹಲಿ, ಜೂ.20- ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಈ ಸಮಯಕ್ಕೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಸತ್ತಿನ ಪ್ರತಿಯೊಬ್ಬರು ಸದಸ್ಯರೂ ಅದಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎರಡನೆ ಅವಧಿಯ ಎನ್‍ಡಿಎ ಸರ್ಕಾರದ ಮೊದಲ ಅಧಿವೇಶನದ ಜಂಟಿ ಸಂಸತ್ತನ್ನು ಉದ್ದೇಶಿಸಿ ಇಂದು ಭಾಷಣ ಮಾಡಿದ ರಾಷ್ಟ್ರಪತಿಗಳು, ಬಲಿಷ್ಠ, ಸುಭದ್ರ ಮತ್ತು ಎಲ್ಲರನ್ನೂ ಒಳಗೊಂಡ ಭಾರತದ ನಿರ್ಮಿಸಲು ಭಾರತ ಮುಂದಿನ ಹೆಜ್ಜೆಯಿಡುತ್ತಿದೆ ಎಂದರು.

2014ರಲ್ಲಿ ಆರಂಭವಾದ ದೇಶದ ಅಭಿವೃದ್ಧಿಯ ಪಯಣವನ್ನು ಮುಂದುವರಿಸಿಕೊಂಡು ಹೋಗಲು ಭಾರತ ದೇಶದ ಜನರು ತೀರ್ಪು ಕೊಟ್ಟಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

17ನೇ ಲೋಕಸಭೆ ಅಸ್ಥಿತ್ವಕ್ಕೆ ಬಂದ ನಂತರ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‍ನಲ್ಲಿ ಸಾಂಪ್ರದಾಯಿಕ ಭಾಷಣದಲ್ಲಿ ಇಂದು ರಾಷ್ಟ್ರಪತಿ ರೈತರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಶ್ಲಾಘಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ