ಟೋಕಿಯೋದಲ್ಲಿ ಭೂಕಂಪದಿಂದ ಸಂಭವಿಸಿದ ಲಘು ಸುನಾಮಿ-ಘಟನೆಯಲ್ಲಿ ಹಲವರಿಗೆ ಗಾಯ

ಟೋಕಿಯೋ, ಜೂ.19-ಜಪಾನ್ ರಾಜಧಾನಿ ಟೋಕಿಯೋದ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿದ ಲಘು ಸುನಾಮಿಯಿಂದ ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಹಾನಿ ಮತ್ತು ಸಾವು ಸಂಭವಿಸಿಲ್ಲ.

6.4 ತೀವ್ರತೆಯ ಭೂಕಂಪದ ನಂತರ ಸಾಗರಗರ್ಭದಲ್ಲಿ ಸುನಾಮಿ ಸಂಭವಿಸಿತು. ಇದರಿಂದ ರಭಸದ ಅಲೆಗಳು ಟೋಕಿಯೋ ಉತ್ತರ ಭಾಗದ ಕಡಲ ಕಿನಾರೆ ಮೇಲೆ ಅಪ್ಪಳಿಸಿದ್ದು, 16 ಮಂದಿಗೆ ಗಾಯಗಳಾಗಿವೆ.

ಭೂಕಂಪದಿಂದ ಮೂರು ಅಡಿಗಳಷ್ಟು ಎತ್ತರಕ್ಕೆ ಸಮುದ್ರ ಉಕ್ಕಿ ಕರಾವಳಿ ತೀರಗಳನ್ನು ಅಪ್ಪಲಿಸಲಿದೆ ಎಂದು ನಿನ್ನೆ ಭೂಗರ್ಭ ಅಧ್ಯಯನ ಸಂಸ್ಥೆ ಎಚ್ಚರಿಕೆ ನೀಡಿತ್ತು. ಆದರೆ ಸುನಾಮಿ 10 ಸೆಂ.ಮೀ.ಗಳಷ್ಟು ದಾಖಲಾಗಿದೆ. ಇದರಿಂದ ಸಂಭವನೀಯ ಅಪಾಯ ತಪ್ಪಿದಂತಾಗಿದೆ.

ಭೂಕಂಪದ ನಂತರ ಎರಡೂವರೆ ಗಂಟೆಗಳ ಕಾಲ ಚಾಲ್ತಿಯಲ್ಲಿದ್ದ ಸುನಾಮಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಹಿಂದಕ್ಕೆ ಪಡೆದಿದೆ.

ಭೂಕಂಪ ಮತ್ತು ಸುನಾಮಿ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರ ಕಟ್ಟೆಚ್ಚರ ವಹಿಸಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಮ್ಮ ಪಡೆಗಳು ಸದಾ ಸಜ್ಜಾಗಿವೆ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಸುದ್ದಿಗಾರರಿಗೆ ತಿಳಿಸಿದರು.

2017ರಲ್ಲಿ ಪ್ರಬಲ ಭೂಕಂಪದಿಂದ ಜಪಾನ್‍ನಲ್ಲಿ 17 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ