![Roshan-Baig_710x400xt](http://kannada.vartamitra.com/wp-content/uploads/2019/06/Roshan-Baig_710x400xt-676x381.jpg)
ನವದೆಹಲಿ, ಜೂ.19-ಶಾಸಕ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ. ಕೆಪಿಸಿಸಿ ಶಿಫಾರಸು ಆಧರಿಸಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಷನ್‍ಬೇಗ್ ಅವರು ಅಶಿಸ್ತನ್ನು ಪ್ರದರ್ಶಿಸಿದರು. ಪಕ್ಷದಲ್ಲಿ ಅಶಿಸ್ತನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತು ಅವರಿಗೆ ನೋಟೀಸ್ ಕೂಡ ನೀಡಲಾಗಿತ್ತು. ನೋಟೀಸ್‍ಗೆ ರೋಷನ್‍ಬೇಗ್ ಉತ್ತರ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಕೆಪಿಸಿಸಿ ವರದಿ ಆಧರಿಸಿ ಹೈಕಮಾಂಡ್ ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಿದರು.