ಕೊಲೆ ಆರೋಪ ಹಿನ್ನಲೆ ಕೇಂದ್ರ ಸಚಿವರ ಪುತ್ರನ ಬಂಧನ

ನವದೆಹಲಿ, ಜೂ.19- ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಪ್ರಲ್ಹಾದ್ ಸಿಂಗ್ ಸಚಿವ ಅವರ ಪುತ್ರನನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಕೊಲೆ, ಅಪಹರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ 26ವರ್ಷದ ಪ್ರಬಲ ಪಟೇಲ್ ಸೇರಿದಂತೆ 6 ಮಂದಿ ಆರೋಪಿಗಳನ್ನು ಭೂಪಾಲನ ನರಸಿಂಗ್‍ಪುರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ.

ಸೋಮವಾರ ರಾತ್ರಿ ಇದೇ ಪ್ರಕರಣದಲ್ಲಿ ಪ್ರಲ್ಹಾದ್ ಪಟೇಲ್ ಸಹೋದರ ಮತ್ತು ಬಿಜೆಪಿ ಶಾಸಕ ಜಲಮ್‍ಸಿಂಗ್ ಪಟೇಲ್ ಅವರನ್ನು ಕೂಡ ಬಂಧಿಸಲಾಗಿದೆ. ಸೋಮವಾರ ರಾತ್ರಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಹತ್ಯೆಗೈಯಲಾಗಿತ್ತು.

ಇದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಪಟೇಲ್ ಪುತ್ರ ಮತ್ತು ಸಹೋದರನ ಕೈವಾಡವಿರುವುದು ಸಾಬೀತಾಗಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರೊಬ್ಬರ ಆಪ್ತರನ್ನು ಪೊಲೀಸರು ಬಂಧಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸೋಮವಾರ ಗೋಟೆಗಾವ್, ನರಸಿಂಗ್‍ಪುರ ಜಿಲ್ಲೆಯಲ್ಲಿ ಯುವಕರ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಗೃಹರಕ್ಷಕದಳ ಪೇದೆ ಈಶ್ವರ್ ರೈ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಪೆÇಲೀಸರು ಸಚಿವರ ಪುತ್ರರನ್ನು ವಶಕ್ಕೆ ಪಡೆಯುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ