ರಾಜ್ಯ ಸರ್ಕಾರದಿಂದ ಗೃಹ ಇಲಾಖೆಗೆ ಮೇಜರ್ ಸರ್ಜರಿ

ಬೆಂಗಳೂರು, ಜೂ. 17- ಗೃಹ ಇಲಾಖೆಗೆ ಮೇಜರ್ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ಸೇರಿದಂತೆ ಒಟ್ಟು 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ಹಲವು ದಿನಗಳಿಂದ ಆಯಕಟ್ಟಿನ ಸ್ಥಳದಲ್ಲೇ ಹುದ್ದೆಗಿಟ್ಟಿಸಿದ್ದ ಕೆಲವು ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನಿಲ್‍ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಅವರಿಗೆ ಐಜಿಪಿ ಹುದ್ದೆಯಿಂದ ಎಡಿಜಿಪಿ ಬಡ್ತಿ ನೀಡಿರುವುದಲ್ಲದೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಪರಾಧಗಳನ್ನು ನಿಯಂತ್ರಣಕ್ಕೆ ತರುವುದು, ರಿಯಲ್ ಎಸ್ಟೇಟ್ ಮಾಫಿಯಾ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಅಲೋಕ್‍ಕುಮಾರ್ ಅವರಿಗೆ ನಗರ ಪೆÇಲೀಸ್ ಆಯುಕ್ತರ ಸ್ಥಾನ ನೀಡಲಾಗಿದೆ.

ಈ ಹಿಂದೆ ಅಲೋಕ್‍ಕುಮಾರ್ ಆ್ಯಂಬಿಡೆಂಡ್ ವಂಚನೆ ಪ್ರಕರಣ ಸೇರಿದಂತೆ ಸಮಾಜಘಾತುಗಳ ಶಕ್ತಿಗಳಿಗೆ ಬಿಸಿ ಮುಟ್ಟಿಸಿದ್ದು, ರೌಡಿ ಹಾವಳಿ ನಿಯಂತ್ರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳನ್ನು ಮಟ್ಟ ಹಾಕಿದ್ದರು. ಪೊಲೀಸ್ ಇಲಾಖೆಯಲ್ಲಿ ಕೆಲವು ಮಹತ್ವದ ಸುಧಾರಣೆಗಳನ್ನು ತಂದಿದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿಶೇಷ ಆಸಕ್ತಿ ವಹಿಸಿ ಅಲೋಕ್‍ಕುಮಾರ್ ಅವರನ್ನು ನೇಮಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಾಲಿ ಆಯುಕ್ತರಾಗಿರುವ ಟಿ.ಸುನಿಲ್‍ಕುಮಾರ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ನೇಮಿಸಿ ವರ್ಗಾವಣೆಗೊಳಿಸಿದೆ.

ರಾಷ್ಟ್ರದ ಗಮನ ಸೆಳೆದಿರುವ ಐಎಂಎ ವಂಚನೆ ಪ್ರಕರಣದ ವಿಶೇಷ ತನಿಖಾ ದಳ (ಎಸ್‍ಐಟಿ) ಮುಖ್ಯಸ್ಥರಾಗಿರುವ ಡಿಐಜಿ ರವಿಕಾಂತೇಗೌಡ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಡಿಐಜಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಪತ್ರಕರ್ತ ಗೌರಿಲಂಕೇಶ್ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಬೇಧಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ಎಮ್.ಎನ್.ಅನುಚೇತನ್ ಅವರನ್ನು ಬೆಂಗಳೂರು ರೈಲ್ವೆ ಎಸ್‍ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಆಗಿದ್ದ ರವಿಚನ್ನಣ್ಣವರ ಅವರನ್ನು ಸಿಐಡಿ ವಿಭಾಗದ ಎಸ್‍ಪಿಯನ್ನಾಗಿ, ರೈಲ್ವೆ ವಿಭಾಗದ ಎಸ್‍ಪಿ ಆಗಿದ್ದ ಡಾ.ಭೀಮಾಶಂಕರ್ ಎಸ್.ಗುಳೇದ್ ಅವರನ್ನು ಈಶ್ಯಾನ ವಿಭಾಗ ಡಿಸಿಪಿಯನ್ನಾಗಿ ನೇಮಕ ಮಾಡಲಾಗಿದೆ.

ಲೋಕಸಭೆ ಚುನಾವಣೆಯ ನಂತರ ಎರಡು ವಾರಗಳ ಹಿಂದೆ ಇದೇ ರೀತಿ ಐಎಎಸ್ ಅಧಿಕಾರಿಗಳನ್ನು ದೊಡ್ಡಮಟ್ಟದಲ್ಲಿ ವರ್ಗಾವಣೆ ಮಾಡಲಾಗಿತ್ತು.ಈಗ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸುವ ಮೂಲಕ ಸಿಎಂ ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ ನಡೆಸಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ:
ಅಲೋಕ್ ಕುಮಾರ್ – ಪೊಲೀಸ್ ಆಯುಕ್ತರು ಬೆಂಗಳೂರು ಮಹಾನಗರ
ಟಿ.ಸುನಿಲ್ ಕುಮಾರ್-ಎಡಿಜಿಪಿ (ನೇಮಕಾತಿ) ಬೆಂಗಳೂರು
ಅಮೃತ್‍ಪೌಲ್- ಐಜಿಪಿ ಪೂರ್ವವಿಭಾU ದಾವಣಗೆರೆ
ಉಮೇಶ್‍ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಲಯ ಬೆಂಗಳೂರು ನಗರ
ವಿಜಯಕುಮಾರ್ ಸಿಂಗ್- ಐಜಿಪಿ ಮತ್ತು ಗೃಹ ಇಲಾಖೆ ಕಾರ್ಯದರ್ಶಿ
ಸೌಮೇಂದು ಮುಖರ್ಜಿ-ಐಜಿಪಿ ಆತಂರಿಕ ಭದ್ರತೆ ವಿಭಾಗ ಬೆಂಗಳೂರು
ರಾಘವೇಂದ್ರ ಸುಹಾಸ್- ಐಜಿಪಿ ದಕ್ಷಿಣ ವಲಯ, ಮೈಸೂರು
ಡಾ. ಬಿ.ಆರ್.ರವಿಕಾಂತೇಗೌಡ-ಡಿಐಜಿ, ಅಪರಾಧವಿಭಾಗ (ಸಿಸಿಬಿ) ಬೆಂಗಳೂರು ನಗರ
ಅಮಿತ್ ಸಿಂಗ್- ಕಮಾಂಡೆಂಟ್ ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಅಕಾಡೆಮಿ ಬೆಂಗಳೂರು
ಡಾ. ರಾಮನಿವಾಸ್ ಸಪೇಟ್-ಎಸ್‍ಪಿ, ಎಸಿಬಿ ಬೆಂಗಳೂರು
ಎಮ್.ಎನ್.ಅನುಚೇತ-ಎಸ್‍ಪಿ ರೈಲ್ವೆ ವಿಭಾಗ ಬೆಂಗಳೂರು
ಬಿ.ರಮೇಶ್-ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು
ರವಿ ಡಿ.ಚೆನ್ನಣ್ಣನವರ್-ಎಸ್‍ಪಿ ಸಿಐಡಿ ವಿಭಾಗ ಬೆಂಗಳೂರು
ಡಾ.ಭೀಮಾಶಂಕರ್ ಎಸ್.ಗುಳೇದ್-ಡಿಸಿಪಿ ಈಶಾನ್ಯ ಬೆಂಗಳೂರು
ಸಿ.ಬಿ.ರಿಷಂತ್- ಎಸ್‍ಪಿ ಮೈಸೂರು ಜಿಲ್ಲೆ
ಮಹಮ್ಮದ್ ಸುಜೀತ್- ಎಸ್‍ಪಿ ಕೆಜಿಎಫ್
ಟಿ.ಪಿ.ಶಿವಕುಮಾರ್-ಎಸ್‍ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಎನ್.ವಿಷ್ಣುವರ್ಧನ-ಡಿಸಿಪಿ ಆಡಳಿತ ವಿಭಾಗ ಬೆಂಗಳೂರು ನಗರ
ಕಲಾಕೃಷ್ಣಸ್ವಾಮಿ- ನಿರ್ದೇಶಕರು ವಿಧಿವಿಜ್ಞಾನ ಪ್ರಯೋಗಾಲಯ ಬೆಂಗಳೂರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ