ಬೆಂಗಳೂರು, ಜೂ.17- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಇನ್ನು 15 ದಿನಗಳೊಳಗಾಗಿ ನಮ್ಮ ಬೇಡಿಕೆ ಈಡೇರದಿದ್ದರೆ ಜು.1ರಿಂದ ನಾವ್ಯಾರು ಕಸವನ್ನು ಎತ್ತುವುದಿಲ್ಲ ಎಂದು ಪೌರ ಕಾರ್ಮಿಕರ ಸಂಘಟನೆ ಅಧ್ಯಕ್ಷ ನಾರಾಯಣ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿ ಎದುರು ಸಾವಿರಾರು ಜಮಾಯಿಸಿದ ಪೌರ ಕಾರ್ಮಿಕರು ಮೂರು ತಿಂಗಳಿಗೊಮ್ಮೆ ನಮಗೆ ಸಂಬಳ ಆಗುತ್ತಿದೆಯೇ.ಕಡಿಮೆ ಸಂಬಳದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಹೆಲ್ತ್ ಕಾರ್ಡ್ ಹಾಗೂ ಮೂರು ದಿನ ಸಂಬಳ ಸಹಿತ ರಜೆ ನೀಡಬೇಕು. ಪ್ರತಿ ಭಾನುವಾರ ಅರ್ಧ ದಿನ ರಜೆ, ಬಯೋ ಮೆಟ್ರಿಕ್ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪೌರ ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಏನಾದರೂ ಅವಘಡ ಸಂಭವಿಸಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಬೇಕು. ನಮ್ಮ ಬೇಡಿಕೆಗಳನ್ನು ಜು.1ರೊಳಗೆ ಈಡೇರಿಸದಿದ್ದರೆ ನಾವ್ಯಾರು ಕಸ ಎತ್ತದಿರಲು ನಿರ್ಧಾರ ಕೈಗೊಂಡಿದ್ದೇವೆ ಎಂದು ಪೌರ ಕಾರ್ಮಿಕ ಸಂಘಟನೆಯ ಅಧ್ಯಕ್ಷ ನಾರಾಯಣ್ ತಿಳಿಸಿದ್ದಾರೆ.