ಶಿವರಾಜ್ ವಿ.ಪಾಟೀಲ್ ಪ್ರಾಮಾಣಿಕತೆ, ಪಾರದರ್ಶತೆ ಹಾಗೂ ಸತ್ಯಪರತೆ ನ್ಯಾಯಾಮೂರ್ತಿಯಾಗಿದ್ದರು-ರೇವಣ್ಣ ಸಿದ್ದಯ್ಯ

ಬೆಂಗಳೂರು, ಜೂ.16- ರಾಜಸ್ಥಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತಂದ ಗೌರವ ಶಿವರಾಜ್.ವಿ.ಪಾಟೀಲ್ ಅವರದ್ದು. ರಾಜ್ಯದಲ್ಲಿ ಹತ್ತು ವರ್ಷಗಳ ಕಾಲ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸತ್ಯಪರತೆ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರದ್ದು ಎಂದು ಹಿರಿಯ ಐಪಿಎಸ್ ಅಧಿಕಾರಿ ರೇವಣ್ಣ ಸಿದ್ದಯ್ಯ ಹೇಳಿದರು.

ಬೆಂಗಳೂರು ಸಿಟಿ ಇನ್ಸ್‍ಟಿಟ್ಯೂಟ್ ಸಂಭಾಗಣದಲ್ಲಿ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಪ್ರತಿಷ್ಟಾನ ಸೇವಾ ಸಂಸ್ಥೆಯಿಂದ ನಡೆದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶಿವರಾಜ್.ವಿ.ಪಾಟೀಲ್‍ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಹಣ, ಆಮಿಷಗಳಿಗೆ ಒಳಪಡದೇ ಬಹಳ ನಿಷ್ಠಾವಂತರಿಗೆ, ನಿಷ್ಕಳಂಕವಾಗಿ ತಮ್ಮ ಸೇವೆಯನ್ನು ಸಲ್ಲಿಸಿದವರು ಎಂದು ಬಣ್ಣಿಸಿದರು.

ಉದಯ ಬಳ್ಳ ಮಾತನಾಡಿ, ದೇಶದಲ್ಲಿ ಆರ್ಥಿಕವಾಗಿ ಸಬಳರಾದವರು ಬಡವರ ಬಗ್ಗೆ ಆಲೋಚಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಾವು ಸಹಾಯ ಮಾಡ್ಬೇಕು.ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರು ಸದಾ ಮುಂದಿರುತ್ತಾರೆ ಎಂದು ಹೇಳಿದರು.

ಲೇಖಕ ಡಾ.ಅಮರೇಶ ಯತಗಲ್ ಮಾತಮಾಡಿ, ಶಿವರಾಜ್‍ಪಾಟೀಲ್ ಅವರ ವ್ಯಕ್ತಿತ್ವ ತುಂಬ ದೊಡ್ಡದು. ಬೆಲ್ಲದ ರೀತಿಯಲ್ಲಿ ಅವರ ಬದುಕು ಸಿಹಿಯಾಗಿದೆ.ಅವರ ಸರಳ ವ್ಯಕ್ತಿತ್ವದಿಂದ ಸಮಾಜಕ್ಕೆ ಸಿಹಿಯನ್ನು ನೀಡಿದರು.ಅವರ ಜೀವನ ಚರಿತ್ರೆ ಪುಸ್ತಕ ರಚಿಸಿದ ನಾನು ಧನ್ಯ ಎಂದರು.

ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಜಿ.ಫಲ್ಲವಿ, ಸಹನಾ ಬಿ, ಪ್ರಿಯಾಂಕ್ ಎಂ.ಆರ್.ರೇಖಾ ವಿ. ಹಾಗೂ ನೀಟ್‍ಪರೀಕ್ಷೆಯಲ್ಲಿ ಉತ್ತೀರ್ಣರಾದ, ರಾಯಚೂರು ಜಿಲ್ಲೆಯ ಅತಿಹೆಚ್ಚು ಅಂಕ ಪಡೆ ಇಬ್ಬರು ವಿದ್ಯಾರ್ಥಿಗಳಿಗೆ 25 ಸಾವಿರ ನಗದು ನೀಡಲಾಯಿತು. ಪ್ರತಿಭಾನ್ವಿತ ಪೋಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಬಳಿಕ ಪೋಷಕರು ಹಾಗೂ ವಿದ್ಯಾರ್ಥಿಗಳು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಅವರ ಸಂಸ್ಥೆಯಿಂದ ನಮ್ಮ ವಿದ್ಯಾಭ್ಯಾಸಕ್ಕೂ ತುಂಬ ಸಹಾಯ ಮಾಡಿ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶೇಖರ್‍ಗೌಡ ಪಾಟೀಲ್, ಸುಭಾಷ್ ಅಡಿಯ ಹಾಗೂ ಹಿರಿಯ ಐಎಎಸ್‍ಅಧಿಕಾರಿ ಜಾವೇರಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ